ವಿಟ್ಲ: ಸೈಂಟ್ ರೀಟಾ ಶಾಲೆಯಲ್ಲಿ 30-08-2016ರಂದು ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ನಡೆದ ವಲಯ ಮಟ್ಟದ ವಾಲಿಬಾಲ್ ಪಂದ್ಯಾಟವನ್ನು ಉಲ್ಲಾಸ್ ಸಿಕ್ವೇರಾ ಉದ್ಘಾಟಿಸಿದರು. ಶಾಲಾ ಸಂಚಾಲಕ ಫಾ| ಎರಿಕ್ ಕ್ರಾಸ್ತಾ, ಲೂವಿಸ್ ಮಸ್ಕರೇನಸ್, ಲಯನ್ ಅಧ್ಯಕ್ಷ ಸುರ್ಶನ ಪಡಿಯಾರ್, ಉಮಾನಾಥ, ಮುಖ್ಯಶಿಕ್ಷಕ ಸಚಿನ್, ದೈಹಿಕ ಶಿಕ್ಷಕರು, ಸಹಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
