ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಆಗಸ್ಟ್ 21 ರಂದು ಆನ್‍ಲೈನ್ ರೂಮ್ ಬುಕಿಂಗ್ ಸೌಲಭ್ಯಕ್ಕೆ ಚಾಲನೆ ದೊರೆತಿದೆ. ಭಕ್ತಾದಿಗಳ ಅನುಕೂಲಕ್ಕಾಗಿ ಶ್ರೀ ಕ್ಷೇತ್ರದ ಅಧಿಕೃತ ವೆಬ್ ಪೇಜ್‍ನಲ್ಲಿ ಈ ಆನ್‍ಲೈನ್ ಬುಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರಸ್ತುತ ಧರ್ಮಸ್ಥಳದಲ್ಲಿರುವ “ರಜತಾದ್ರಿ” ವಸತಿಗೃಹದ 110 ರೂಮ್‍ಗಳು ಈ ಆನ್‍ಲೈನ್ ಬುಕಿಂಗ್ ಸೌಲಭ್ಯದಡಿ ಭಕ್ತಾದಿಗಳಿಗೆ ಲಭಿಸಲಿದೆ.

IMG_2361 copy
ಬುಕಿಂಗ್ ಹೇಗೆ?
ಈ ಆನ್‍ಲೈನ್ ರೂಮ್ ಬುಕಿಂಗ್‍ಗಾಗಿ ಭಕ್ತಾದಿಗಳು ಶ್ರೀ ಕ್ಷೇತ್ರ ಧರ್ಮಸ್ಥಳದ ವೆಬ್‍ಪೇಜ್   http://www.shridharmasthala.org/   ಗೆ ಲಾಗಿನ್ ಆಗಿ ರೂಮ್ ಬುಕಿಂಗ್ ಮಾಡಲು ಸಿದ್ಧಪಡಿಸಿರುವ ಲಿಂಕ್ ಮೂಲಕ ಬುಕ್ ಮಾಡಬಹುದು. ಸೂಕ್ತ ವಿವರಗಳನ್ನು ತುಂಬಿದ ನಂತರ ಬುಕಿಂಗ್ ಕುರಿತಾದ ಧೃಢಿಕರಣ ಪತ್ರ ಈ ಮೇಲ್ ಮೂಲಕ ಬುಕ್ ಮಾಡಿದವರಿಗೆ ತಲುಪುತ್ತದೆ. ನಂತರ ಈ ಪತ್ರದ ಪ್ರತಿಯನ್ನು ಶ್ರೀ ಕ್ಷೇತ್ರಕ್ಕೆ ಬಂದು ವಸತಿಗೃಹದಲ್ಲಿ ತೋರಿಸಿ ರೂಮ್ ಪಡೆಯಬಹುದು.
ಸದ್ಯಕ್ಕೆ ರೂಮ್ ಬುಕಿಂಗ್‍ಗೆ ಮಾತ್ರ ವ್ಯವಸ್ಥೆ ಇದ್ದು ಮುಂದಿನ ದಿನಗಳಲ್ಲಿ ರೂಮ್ ಬುಕಿಂಗ್ ಹಣ ಪಾವತಿಗೂ ಆನ್‍ಲೈನ್‍ನಲ್ಲೇ ವ್ಯವಸ್ಥೆ ಕಲ್ಪಿಸಲಾಗುವುದು. ಭಕ್ತಾದಿಗಳು ಈ ಸೌಲಭ್ಯವನ್ನು ಸದ್ಭಳಕೆ ಮಾಡಿಕೊಳ್ಳಬಹುದು

By suddi9

Leave a Reply

Your email address will not be published. Required fields are marked *