ಕೈಕಂಬ:ಹಿಂದಿನ ಕಾಲದ ಆಟಿಯ ತಿನಿಸುಗಳಲ್ಲಿ ಜೌಷಧೀಯ ಗುಣಗಳಿವೆ. ಮತ್ತು ಆಟಿ ಆಚರಣೆಯಲ್ಲಿ ವೈಜ್ಞಾನಿಕ ಹಿನ್ನಲೆಯಿದೆ. ಎಂದು ಹಿರಿಯ ಹವ್ಯಾಸಿ ಭಾಗವತರಾದ ಅನೂಸೂಯ ಕಾಜವ ತಿಳಿಸಿದರು. ಇವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ)ಕಂದಾವರ ಒಕ್ಕೂಟದ ವತಿಯಿಂದ ಕಿನ್ನಿಕಂಬಳ ರಾಧಕೃಷ್ಣ ಭಜನಾ ಮಂದಿರದಲ್ಲಿ ನಡೆದ ಅಟಿಡ್ ಒಂಜಿ ದಿನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

20vp atid onji kutaಈ ಸಂದರ್ಭದಲ್ಲಿ ಪುರುಷೋತ್ತಮ ಗೋಳಿಪಲ್ಕೆ, ಪಂಚಾಯತ್ ಅಧ್ಯಕ್ಷರಾದ ವಿಜಯ್ ಜಿ.ಸುವರ್ಣ, ಜನಜಾಗ್ರತಿ ವೇದಿಕೆಯ ಅಧ್ಯಕ್ಷರಾದ ಶ್ರೀಧರ್ ರಾವ್, ಪೂಜಾ ಸಮಿತಿಯ ಅಧ್ಯಕ್ಷರಾದ ಶಿವರಾಮ್, ಮೇಲ್ವಿಚಾರಕರಾದ ಪ್ರಮೋದ್, ಒಕ್ಕೂಟದ ಅಧ್ಯಕ್ಷರಾದ ಸತೀಶ್ ಶೆಟ್ಟಿ ಕಂದಾವರ, ಸೇವಾ ಪ್ರತಿನಿಧಿ ಶಾಲಿನಿ ಉಪಸ್ಥಿತರಿದ್ದರು. ರೂಪೇಶ್ ಶೆಟ್ಟಿ ಅದ್ಯಪಾಡಿ ಅಧ್ಯಕ್ಷತೆ ವಹಿಸಿದ್ದರು. ನಂತರ ಆಟಿಯ ವಿವಿಧ ತಿಂಡಿ, ತಿನಿಸುಗಳ ಬೋಜನ, ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಿತು. ಹರ್ಷಕುಮಾರ್ ಕಾರ್ಯಕ್ರಮ ನಿರೂಪಿದರು. ಒಕ್ಕೂಟದ ಅಧ್ಯಕ್ಷರಾದ ಸತೀಶ್ ಶೆಟ್ಟಿ ಸ್ವಾಗತಿಸಿ, ತುಕರಾಮ ವಂದಿಸಿದರು. ಒಕ್ಕೂಟದ ಪಧಾದಿಕಾರಿಗಳು ಸಹಕರಿಸಿದರು.

By suddi9

Leave a Reply

Your email address will not be published. Required fields are marked *