ಬಂಟ್ವಾಳ: ಸೌತ್‍ಕೆನರಾ ಪೊಟೋಗ್ರಫರ್ಸ್ ಅಸೋಸಿಯೇಷನ್ ಇದರ ಉಡುಪಿವಲಯದ ಆಶ್ರಯದಲ್ಲಿ ನಡೆಯುವ ಮಾನ್ಸೂನ್ ಗ್ರಾಮೀಣ ಕ್ರೀಡಾಕೂಟ ಆ.28 ಭಾನುವಾರ ಬೆಳಿಗ್ಗೆ 8.30ಕ್ಕೆ ಉಡುಪಿಯ ಚಿಟ್ಟಾಡಿಯ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ಎಸ್‍ಕೆಪಿಎ ಸಲಹಾ ಸಮಿತಿ ಅಧ್ಯಕ್ಷ ವಿಠಲ್ ಚೌಟ ಪಥ ಸಂಚಲನಕ್ಕೆ ಚಾಲನೆ ನೀಡುವರು, ಯುವಜನ ಮತ್ತು ಕ್ರೀಡಾ ಸಚಿವ ಪ್ರಮೋದ್ ಮದ್ವರಾಜ್ ಕ್ರೀಡಾಕೂಟದ ಉದ್ಘಾಟಿಸುವರು, ಎಸ್‍ಕೆಪಿಎ ಜಿಲ್ಲಾಧ್ಯಕ್ಷ ಜಗನ್ನಾಥ ಶೆಟ್ಟಿ ಅಧ್ಯಕ್ಷತೆ ವಹಿಸುವರು. ಕಲ್ಯಾಡಿ ಸ್ಟೆಲ್ಲಾ ಮಾರೀಸ್ ಚರ್ಚ್ ಧರ್ಮಗುರು ಫಾ. ಆಲ್ಬನ್ ಡಿಸೋಜಾ ಕ್ರೀಡಾಕೂಟಕ್ಕೆ ಚಾಲನೆ ನೀಡಲಿರುವರು. ಎಸ್‍ಕೆಪಿಎ ಉಡುಪಿ ವಲಯ ಅಧ್ಯಕ್ಷ ವಾಮನ್ ಪಡುಕೆರೆ, ಜಿಲ್ಲಾ ಕ್ರೀಡಾ ಕಾರ್ಯದರ್ಶಿಗಳಾದ ನಾಗೇಶ್ ಕೋಟ, ಪ್ರವೀಣ್ ಕೊರೆಯಾ, ಜಯಂತ್‍ಗೌಡ ಪುತ್ತೂರು ಗೌರವ ಉಪಸ್ಥಿತರಿರುವರು.

By Suddi9

Leave a Reply

Your email address will not be published. Required fields are marked *