ಎಸ್.ಡಿ.ಎಮ್ ಮಂಗಳಜ್ಯೋತಿ ಕೈಗಾರಿಕಾತರಬೇತಿ ಸಂಸ್ಥೆ ವಾಮಂಜೂರುಇದರ 2016-17 ನೇ ಸಾಲಿನ ಶೈಕ್ಷಣಿಕ ವರ್ಷದತರಬೇತಿಯಉದ್ಘಾಟನೆಯನ್ನು ಮಂಗಳಜ್ಯೋತಿ ಸಮಗ್ರ ಶಾಲೆಯ ಸಭಾಂಗಣದಲ್ಲಿ ದಿನಾಂಕ ಅ.16ರಂದು ನಡೆಯಿತು.
ಕಾರ್ಯಕ್ರಮವನ್ನುಜಿಲ್ಲಾ ಸಣ್ಣಕೈಗಾರಿಕಾ ಸಂಘ ಮಂಗಳೂರು ಇದರಅಧ್ಯಕ್ಷರಾದಎನ್. ಅರುಣ್ ಪಡಿಯಾರ್‍ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತಾತರಬೇತಿಯನ್ನು ಪಡೆಯುವ ಸಂದರ್ಭದಲ್ಲಿ,ತರಬೇತಿಗೆ ಹೆಚ್ಚಿನ ಮಹತ್ವವನ್ನುನೀಡಿ, ತನ್ನಕೌಶಲ್ಯವನ್ನು ಹೆಚ್ಚಿಸುವುದರ ಮೂಲಕ ಮುಂದಿನ ದಿನದಲ್ಲಿಉನ್ನತಕೈಗಾರಿಕಾ ಸಂಸ್ಥೆಯಲ್ಲಿಉದ್ಯೋಗವನ್ನು ಪಡೆಯಲು ಸಾಧ್ಯವಾಗುತ್ತದೆ. ಮಾತ್ರವಲ್ಲದೆತಾವೇ ಸ್ವಂತಉದ್ಯಮವನ್ನು ಪ್ರಾರಂಭಿಸಲು ಸಹಕಾರಿಯಾಗುತ್ತದೆಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾದ ಕೆ.ಜಯರಾಜ್ ಪೈ ಉದ್ಯಮಿಗಳು ಹಾಗೂ ಮಾಜಿಅಧ್ಯಕ್ಷರುಜಿಲ್ಲಾ ಸಣ್ಣಕೈಗಾರಿಕಾ ಸಂಘ ಮಂಗಳೂರು ಇವರು ಮಾತನಾಡುತ್ತಕೌಶಲ್ಯವನ್ನು ಪಡೆದಂತಹ ವ್ಯಕ್ತಿಗೆ ಸ್ವಂತಉದ್ಯಮವನ್ನು ಮಾಡಲು ಸರಕಾರದಿಂದ ಸಿಗುವಂತಹ ಸೌ¯ಭ್ಯಗಳ ಬಗ್ಗೆ ಮಾಹಿತಿಯನ್ನು ನೀಡಿದರು ಹಾಗೂ ತರಬೇತಿಯನ್ನು ಪಡೆಯಲು ಸಂಸ್ಥೆಗೆ ಸೇರಿದಎಲ್ಲಾ ವಿದ್ಯಾರ್ಥಿಗಳಿಗೆ ಶುಭವನ್ನು ಹಾರೈಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತಾಧಿಕಾರಿಯವರಾದ ಶ್ರೀ ಗಣೇಶ್ ಭಟ್ ವಿ.ಮಾತನಾಡುತ್ತಾಇತ್ತೀಚಿನ ದಿನಗಳಲ್ಲಿ ಸರಕಾರದಿಂದಕೌಶಲ್ಯ ಭಾರತ ಯೋಜನೆಗಳ ಮೂಲಕ ಭಾರತದಲ್ಲಿ ಅನೇಕ ಕಂಪೆನಿಗಳು ಉದ್ಯಮವನ್ನು ಪಾರಂಭಿಸುವ ಮೂಲಕ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶಗಳು ಲಭ್ಯವಿದ್ದು ಅವುಗಳನ್ನು ಸದುಪಯೋಗ ಪಡಿಸಬೇಕುಎಂದು ತಿಳಿಸಿದರು.
ಅಂಗವಿಕಲ ಕಲ್ಯಾಣ ಸಂಸ್ಥೆ (ರಿ.)ಮಂಗಳೂರು ಇದರ ಕಾರ್ಯದರ್ಶಿಯವರಾದ ಪ್ರೋ.ಎ. ರಾಜೇಂದ್ರ ಶೆಟ್ಟಿಯವರುಅಧ್ಯಕ್ಷತೆಯನ್ನು ವಹಿಸಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಮಂಗಳಜ್ಯೋತಿ ಪ್ರೌಢ ಶಾಲಾ ವಿಭಾಗದ ಮುಖ್ಯಸ್ಥರಾದಶ್ರೀ ಅಶೋಕ್‍ಕುಮಾರ್ ಶೆಟ್ಟಿ ಮತ್ತು ಮಂಗಳಜ್ಯೋತಿ ಚೈಲ್ಡ್‍ಫಂಡ್‍ಇಂಟರ್ ನ್ಯಾಷನಲ್‍ಯು.ಎಸ್.ಎಯಯೋಜನಾಧಿಕಾರಿಯಾದ ಶ್ರೀ ಪುನೀತ್ ಶೆಟ್ಟಿಯವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನುಐ.ಟಿ.ಐ ಪ್ರಾಶುಂಪಾಲರಾದ ಶ್ರೀ ನರೇಂದ್ರಇವರುಕೈಗಾರಿಕಾತರಬೇತಿ ಸಂಸ್ಥೆಯ ಮಾಹಿತಿ ಹಾಗೂ ಅದರ ಮಹತ್ವವನ್ನು ತಿಳಿಸಿ ಸರ್ವರನ್ನು ಸ್ವಾಗತಿಸಿದರು.
ಕಿರಿಯತರಬೇತಿಅಧಿಕಾರಿಯವರಾದ ಶ್ರೀ ಪ್ರದ್ಯಮ್ನಉಪದ್ಯಾಯರವರು ವಂದಿಸಿದರು ಹಾಗೂ ಕಿರಿಯತರಬೇತಿಅಧಿಕಾರಿಯವರಾದ ಶ್ರೀಮತಿ ಪ್ರಫುಲ್ಲಇವರುಕಾರ್ಯಕ್ರಮವನ್ನು ನಿರೂಪಿಸಿದರು.
