ಬಂಟ್ವಾಳ  ಸ್ವಚ್ಚತೆಯು ಮನೆಯೊಳಗಿನಿಂದಲೇ ಪ್ರಾರಂಭವಾದಾಗ ಪರಿಸರಕ್ಕೆ ವ್ಯಾಪಿಸಿ ಶುಚಿಯಾಗಿರುವುದರಲ್ಲಿ ತೊಡಕಾಗಲಾರದು, ನಿತ್ಯ ಜೀವನದಲ್ಲಿ ಶುಚಿತ್ವವು ನಮ್ಮ ಒಂದು ಭಾಗವಾದರೆ ಸ್ವಚ್ಚತೆಯ ಕುರಿತು ಪ್ರತ್ಯೇಕವಾಗಿ ಅರಿವು ಮೂಡಿಸಬೇಕಾದ ಅಗತ್ಯವಿರುವುದಿಲ್ಲವೆಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ.ಯೋಜನೆಯ ಯೋಜನಾಧಿಕಾರಿಯವರಾದ ಕು| ಸುನಿತಾ ನಾಯಕ್‍ರವರು ಬಂಟ್ವಾಳ ತಾಲೂಕು ಕಲ್ಲಡ್ಕ ವಲಯದ ಪ್ರಗತಿಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ ವೀರಕಂಭ ಮತ್ತು ಶ್ರೀ. ಅಯ್ಯಪ್ಪ ಸ್ವಾಮಿ ಭ. ಮಂದಿರ ಮಂಗಳ ಪದವು ಇವುಗಳ ಜಂಟಿ ಆಶ್ರಯದಲ್ಲಿ ನಡೆದ ಸ್ವಚ್ಚತಾ ಕಾರ್ಯಕ್ರಮವನ್ನು ಉದ್ಘಾಟಿಸಿ ತಿಳಿಸಿದರು.

01 (1)
ಮುಖ್ಯ ಅತಿಥಿಗಳಾಗಿದ್ದ ಪ್ರಗತಿಪರ ಕೃಷಿಕರಾದ ಶ್ರೀ ಮಹಾಲಿಂಗ ಭಟ್‍ರವರು ಡಾ||.ಡಿ ವೀರೇಂದ್ರ ಹೆಗ್ಗಡೆಯವರ ಸ್ವಸಹಾಯ ಸಂಘಗಳ ಸದಸ್ಯರ ಮೂಲಕ ತಮ್ಮ ಪರಿಸರದ ಸ್ವಚ್ಚತೆ ಮತ್ತು ನೈರ್ಮಲ್ಯದ ಬಗ್ಗೆ ಅರಿವು ಮೂಡಿಸುತ್ತಿರುವುದು ಉತ್ತಮವಾದ ಹಾಗೂ ಅರ್ಥಪೂರ್ಣವಾದ ಕೆಲಸವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷಸ್ಥಾನವನ್ನು ವಲಯಾಧ್ಯಕ್ಷರಾದ ಶ್ರೀಯುತ ಸೋಮಶೇಖರ್ ವಹಿಸಿದ್ದರು. ಜನಜಾಗೃತಿ ವೇದಿಕೆಯ ವಲಯದ ಸದಸ್ಯರಾದ ಶ್ರೀಯುತ ವೀರಪ್ಪ ಮೂಲ್ಯ, ಶ್ರೀ. ಅಯ್ಯಪ್ಪ ಸ್ವಾಮೀ ಭಜನಾ ಮಂದಿರದ ಸದಸ್ಯರಾದ ಶ್ರೀ ನಾಗಪ್ಪ, ಒಕ್ಕೂಟದ ನಿಕಟ ಪೂರ್ವ ಅಧ್ಯಕ್ಷರಾದ ಶ್ರೀ ಹರೀಶ್ ಬಂಗೇರ ಉಪಸ್ಥಿರತರಿದ್ದರು.
ಸೇವಾಪ್ರತಿನಿಧಿ ಎಮ್. ಗಿರಿಜಾರವರು ಸ್ವಾಗತಿಸಿ ಪದಾಧಿಕಾರಿ ಸುನೀತಾರವರು ವಂದಿಸಿದರು. ವಲಯ ಮೇಲ್ವಿಚಾರಕ ಶಿವಪ್ಪ ಎಮ್.ಕೆ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *