ವೀರಕಂಭ ಗ್ರಾಮ ಪಂ. ಸದಸ್ಯರು ಹಾಗೂ ಎರ್ಮೆಮಜಲು ಅಂಗನವಾಡಿ ಕೇಂದ್ರದ ಸಮನ್ವಯ ಸಮಿತಿಯ ಅಧ್ಯಕ್ಷರಾದ ಜನಾರ್ಧನ ಪೂಜಾರಿ ನಾರುಕೋಡಿಯವರು ಅಂಗನವಾಡಿ ಎಲ್ಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರವನ್ನು ಉಚಿತವಾಗಿ ನೀಡಿದರು. ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯೆ ಪದ್ಮಾವತಿ, ಜಯಂತಿ ಜನಾರ್ಧನ, ಅಂಗನವಾಡಿ ಶಿಕ್ಷಕಿ ಮೀನಾಕ್ಷಿ, ಸಹಾಯಕಿ ಮಮತಾ ಸಮನ್ವಯ ಸಮಿತಿಯ ಸದಸ್ಯ ಕೃಷ್ಣ ಪ್ರಸಾದ, ಹಾಗೂ ಸ್ತ್ರೀ ಶಕ್ತಿ ಗುಂಪಿನ ಸದಸ್ಯರು ಉಪಸ್ಥಿತರಿದ್ದರು.

