ಮುಂಬಯಿ: ಜೀವನದಲ್ಲಿ ಶಿಸ್ತನ್ನೇ ಆಸ್ತಿಯಾಗಿಸಿದಾಗ ಮಾನವ ಬದುಕು ಹಸನಾಗುವುದು. ಪ್ರಸಕ್ತ ಪ್ರತೀಕ್ಷೆಗಳ ಜಗತ್ತಿನಲ್ಲಿ ಎಲ್ಲರ ಮಟ್ಟವೂ ಹೀನವಾಗಿರುವಾಗ ಸಾಮಾನ್ಯನೇ ಶ್ರೇಷ್ಠನಾಗುವುದು ಜಗದ ರೂಢಿ. ಆದುದರಿಂದ ಸಾಚಾ ವಿನಯದಿಂದ ಸೇವೆಯಲ್ಲಿ ತೊಡಗಿಸಿದಾಗ ಗೌರವಗಳು ತನ್ನೀತಾನೇ ಒದಗಬಲ್ಲವು. ಶ್ರದ್ಧಾಭರಿತ ಶಿಪಾಯಿ, ಸೇವಕರುಗಳ ಸೇವೆಯಿಂದ ಜಗದ ಬದಲಾವಣೆ ಸಾಧ್ಯವಾಗಿದ್ದು, ಇದಕ್ಕೆ ಪೂರಕವಾಗಿ ಸೇವಾದಳ ಶ್ರಮಿಸಬೇಕು.ಸಮವಸ್ತ್ರ ಧರಿಸಿದಾಗ ನಾಚುವ ಗುಣ ಮರೆತು ಮೈಯಲ್ಲಿ ಯುನಿಫಾರ್ಮ್ ಇದ್ದಾಗ ಸಿಗುವ ಗೌರವವೇ ಶ್ರೇಷ್ಠವಾಗಿರುತ್ತದೆ. ಸರಳನಡೆಯಿಂದ ಸಲ್ಲಿಸುವ ಸೇವೆ ಸೇವಾಂಕ್ಷಿಗಳಿಗೆ ಗೌರವವನ್ನು ಸುಲಭವಾಗಿಸುತ್ತದೆ. ಇದು ಸತ್ಯನಿಷ್ಠಾ ಬದುಕಿಗೆ ಪ್ರತಿಷ್ಠೆಯನ್ನೊದಗಿಸುತ್ತದೆ. ಇಂತಹ ಸದ್ಗುಣಗಳನ್ನು ಮೈಗೂಡಿಸಿ ಸೇವಾದಳದ ಶಿಸ್ತು ಆದರ್ಶವಾಗಿಸಿರಿ ಎಂದು ಬಿಲ್ಲವ ಅಸೋಸಿಯೇಶನ್ ಮುಂಬಯಿ ಇದರ ಸೇವಾದಳದ ಕಾರ್ಯಾಧ್ಯಕ್ಷ ಶಂಕರ್ ಡಿ.ಪೂಜಾರಿ ತಿಳಿಸಿದರು.

ವಾದಳದ ಶಿಸ್ತು ಆದರ್ಶಪ್ರಾಯವಾಗಲಿ : ಶಂಕರ್ ಡಿ.ಪೂಜಾರಿ

Billwara Seva Dala Independance-B1
Billwara Seva Dala Independance-B6

 

Billwara Seva Dala Independance-B2

Billwara Seva Dala Independance-B3

Billwara Seva Dala Independance-B4

ಇಂದಿಲ್ಲಿ ಸೋಮವಾರ ಬೆಳಿಗ್ಗೆ ಸಾಂತಕ್ರೂಜ್ ಪೂರ್ವದ ಬಿಲ್ಲವರ ಭವನದಲ್ಲಿ ಅಸೋಸಿಯೇಶನ್‍ನ ಅಧ್ಯಕ್ಷ ನಿತ್ಯಾನನಂದ ಡಿ.ಕೋಟ್ಯಾನ್ ಅಧ್ಯಕ್ಷತೆಯಲ್ಲಿ ಆಚರಿಸಲಾಗಿದ್ದ ರಾಷ್ಟ್ರದ 70ನೇ ಸ್ವಾತಂತ್ರೋತ್ಸವ ಮುಖೇನ ಸಂಭ್ರಮಿಸಿದ ಸೇವಾದಳದ ವಾರ್ಷಿಕ ಕಾರ್ಯಕ್ರಮವನ್ನುದ್ದೇಶಿಸಿ ಶಂಕರ್ ಪೂಜಾರಿ ಮಾತನಾಡಿದರು.

ನಿತ್ಯಾನಂದ್ ಕೋಟ್ಯಾನ್ ಧ್ವಜಾರೋಹಣಗೈದು ರಾಷ್ಟೋತ್ಸವಕ್ಕೆ ಚಾಲನೆಯನ್ನಿತ್ತರು ಹಾಗೂ ಸೇವಾದಳದ ಸದಸ್ಯರಾಗಿದ್ದು ಇತ್ತೀಚೆಗೆ ಸಪ್ತಪದಿ ತುಳಿದ ವಿಶ್ವನಾಥ ಎಂ.ಸುವರ್ಣ ಮತ್ತು ಶ್ರೀಮತಿ ಶಕುಂತಳಾ ವಿ.ಸುವರ್ಣ ನವದಂಪತಿಯನ್ನು ಹಾಗೂ ಸೇವೆಯಿಂದ ನಿವೃತ್ತರಾಗುವ ಶಂಕರ್ ಎಲ್.ಪೂಜಾರಿ ಅವರನ್ನು ಶಾಲು ಹೊದಿಸಿ, ಪುಷ್ಪಗುಪ್ಚ, ಸ್ಮರಣಿಕೆಗಳನ್ನಿತ್ತು ಸನ್ಮಾನಿಸಿ ಅಭಿನಂದಿಸಿದರು.

ಬದುಕಿನ ವಾಸ್ತವವನ್ನು ವಿವೇಕಯುತವಾಗಿ ಬಿಂಬಿಸಿಕೊಂಡಾಗ ಸೇವೆ ಸಾರ್ಥಕವಾಗುವುದು. ಅನಾಚಾರದಿಂದ ದೂರ ಉಳಿದು, ಪರಿಪೂರ್ಣ ಪ್ರಾಮಾಣಿಕತೆಯಿಂದ ಇತರರನ್ನು ಅಳೆದಾಗ ಅವರೂ ತಮ್ಮನ್ನು ಗೌರವದಿಂದ ಅಳೆಯುತ್ತಾರೆ. ಶಿಸ್ತು ಬದ್ಧತೆ ಬದುಕಿನ ಅವಿಭಾಜ್ಯ ಅಂಗವಾಗಿಸಿದಾಗ, ಯಾರಲ್ಲೂ ತಾರತಮ್ಯ ಕಾಣದೆ ಸರ್ವರನ್ನೂ ಸಮಾನರನ್ನಾಗಿಸಿ ಸಮಾನಭಾವನೆಯಿಂದ ಕಂಡಾಗ ಕೊಡುಕೊಳ್ಳುವಿಕೆಯ ಗೌರವ ತನ್ನೀತಾನೇ ಪಾಪ್ತಿಯಾಗುತ್ತದೆ. ಇದನ್ನು ಗಳಿಸುವಲ್ಲಿ ಸ್ವಇಪ್ಛಾ ಪ್ರಯತ್ನ ರೂಢಿಸಿ ಎಂದೂ ಶಂಕರ್ ಪೂಜಾರಿ ಸೇವಾದಳದ ಕಾರ್ಯಕರ್ತರಿಗೆ ಕರೆಯಿತ್ತರು.

ಸಮಾಜ ಸೇವಕ ಶಂಕರ್ ಕೆ.ಸುವರ್ಣ ಖಾರ್, ಅಸೋಸಿಯೇಶನ್‍ನ ಮಾಜಿ ಅಧ್ಯಕ್ಷ ಎಲ್.ವಿ ಅವಿೂನ್, ಉಪಾಧ್ಯಕ್ಷರುಗಳಾದ ರಾಜ ವಿ.ಸಾಲ್ಯಾನ್, ಭಾಸ್ಕರ ವಿ.ಬಂಗೇರ, ಡಾ| ಯು.ಧನಂಜಯ ಕುಮಾರ್, ಮಹಿಳಾ ವಿಭಾಗಧ್ಯಕ್ಷೆ ಶಕುಂತಳಾ ಕೆ.ಕೋಟ್ಯಾನ್ ವೇದಿಕೆಯಲ್ಲಿ ಅಸೀನರಾಗಿದ್ದು,

ಸ್ವಾತಂತ್ರಪೂರ್ವ ಮತ್ತು ಆದಿಯಲ್ಲಿ ಭಾರತೀಯರಲ್ಲಿ ಅನೇಕರಿಗೆ ಒಪ್ಪೊತ್ತಿನ ಊಟ ಕಷ್ಟವಾಗಿ ಅನ್ನ ಸಂಕಟ ಎದುರಿಸುವಂತಿತ್ತು. ಜೈ ಜವಾನ್ ಜೈಕಿಸಾನ್ ಹೋರಾಟದ ಪರಿಣಾಮ ರೈತರಿಗೆ ಸಹಯೋಗ ದೊರೆತು ಇಂದು ಅನ್ನಭಂಡಾರ ನಮ್ಮದಾಗಿದೆ. ಆದರೆ 20%ಕ್ಕೂ ಅಧಿಕ ಭಾರತೀಯರು ತಿನಿಸುಗಳನ್ನು ದುರುಪಯೋಗ ಪಡಿಸುತ್ತಿರುವುದು ನಮ್ಮ ದುರದೃಷ್ಟ. ಕಾಲ ಹರಣಗೈದು ಬರೇ ಸಂಭಳಕ್ಕಾಗಿ ದುಡಿಯುವ ಸರಕಾರಿ ಕರ್ಮಚಾರಿಕ್ಕಿಂತ ದಿನವಿಡೀ ಶ್ರಮಿಸುವ ರೈತರು, ಸೇವಾದಳದಂತಹ ಶ್ರಮಿಕರಿಗೆ ನಾವು ಉತ್ತೇಜಿಸಬೇಕು. ಆ ಮೂಲಕ ರಾಷ್ಟ್ರವಿಕಾಸನದ ದೀಪ ಪ್ರಜ್ವಲಿಸಬೇಕು ಎಂದು ಶಂಕರ್ ಸುವರ್ಣ ನುಡಿದರು.

ಎಲ್.ವಿ ಅವಿೂನ್ ಮಾತನಾಡಿ ಇದು ತ್ಯಾಗ, ಪರಿಶ್ರಮದ ಧ್ಯೋತಕವಾಗಿ ಸಂಭ್ರಮಿಸುವ ದಿನಾಚರಣೆ ಆಗಬೇಕು. ಸ್ವತಂತ್ರ್ಯಕ್ಕಾಗಿ ದುಡಿದವರ ಸಂಭ್ರಮ ಅನುಭವಿಸಬೇಕು.ಅಂದು ಸ್ವತಂತ್ರ್ಯದ ಸ್ವಾರ್ಥ ಮೆರೆಯುತ್ತಿದ್ದರೆ ಇಂದು ಸ್ವಾರ್ಥದ ಬದುಕು ಕಂಗೋಳಿಸುತ್ತುರುವುದು ಶೋಚನೀಯ. ಜಾತಿಬೇಧ, ಹಿರಿಕಿತನ, ದ್ವೇಷ, ಅಸೂಯೆ, ಕಹಿಭಾವನೆಗಳಿಂದ ಮುಕ್ತರಾದಾಗ ಸ್ವತಂತ್ರದೇಶದ ಬದುಕು ಅರ್ಥಪೂರ್ಣವಾಗುತ್ತದೆ ಎಂದರು.

ದೇಶಭಕ್ತಿ ಅರಿತಾಗ ದೇಶಸೇವೆ ಸಾಧ್ಯವಾಗುವುದು. ಆದುದರಿಂದ ಪೂರ್ವಜರ ಅರ್ಪಣಾ ವ್ಯಕ್ತಿತ್ವದ ಮನೋಭಾವ ನಮ್ಮಲ್ಲಿ ಸಿದ್ಧಿಯಾಗಬೇಕು. ಹಿತವಿಲ್ಲದವರ ಒಡನಾಟದಿಂದ ಸಿಗುವ ಲಾಭಕ್ಕಿಂತ ಹಿತವಾದವÀರಿಂದ ದೊರಕುವ ಲಾಭಕ್ಕೇ ಮನಸ್ಸುಗಳನ್ನು ತೃಪ್ತಿಕೊಂಡಾಗ ಸಮಾಜ ಸೇವೆಯಿಂದ ತೃಪ್ತಿ ದೊರಕುವುದು. ಸೇವಾದಳದ ಕಾರ್ಯಕರ್ತರನ್ನು ಸಮ್ಮಾನಿಸುವುದರಿಂದ ಅವರಲ್ಲಿ ಆತ್ಮವಿಶ್ವಾಸ ಮೂಡುವುದು. ಸೇವಕರು ಆದರ್ಶ ಸಮಾಜಕ್ಕೆ ಆಕಾರ ನೀಡಬಲ್ಲವರಾಗಿದ್ದಾರೆ. ಅದರಿಂದ ನಿಸ್ವಾರ್ಥ ಸೇವೆಗೆ ಪೆÇ್ರೀತ್ಸಾಹಿಸುವಂತಾಗುವುದು ಎಂದು ಅಧ್ಯಕ್ಷೀಯ ನುಡಿಗಳನ್ನಾಡಿ ನಿತ್ಯಾನನಂದ ಕೋಟ್ಯಾನ್ ತಿಳಿಸಿದರು.

ಕಾರ್ಯಕ್ರಮದಲ್ಲಿ ಸೇವಾದಳದ ಉಪ ದಳನಾಯಕ ಸುಧಾಕರ ಎ.ಪೂಜಾರಿ ಸೇವಾದಳದ ಸದಸ್ಯರು, ಮಹಿಳಾ ಕಾರ್ಯಕರ್ತೆಯರನ್ನೊಳಗೊಂಡು ಸುಮಾರು ತೊಂಭತ್ತು ಸೇವಾಳುಗಳು ಸೇರಿದಂತೆ ಅಸೋಸಿ ಯೇಶನ್‍ನ ಗೌ| ಪ್ರ| ಕೋಶಾಧಿಕಾರಿ ಮಹೇಶ್ ಸಿ.ಕಾರ್ಕಳ, ಗೌ| ಜೊತೆ ಕಾರ್ಯದರ್ಶಿ ಹರೀಶ್ ಜಿ. ಸಾಲ್ಯಾನ್, ಗೌ| ಜೊತೆ ಕೋಶಾಧಿಕಾರಿ ಸದಾಶಿವ ಎ.ಕರ್ಕೇರ, ಯುವಾಭ್ಯುದಯ ಸಮಿತಿ ಮುಖ್ಯಸ್ಥ ನಿಲೇಶ್ ಪೂಜಾರಿ ಪಲಿಮಾರು, ಅಸೋಸಿಯೇಶನ್‍ನ ವ್ಯವಸ್ಥಾಪಕ ಭಾಸ್ಕರ್ ಟಿ.ಪೂಜಾರಿ, ಶ್ರೀನಿವಾಸ ಕರ್ಕೇರ, ಅಶೋಕ್ ಸಸಿಹಿತ್ಲು, ಶಿವರಾಮ ಕೋಟ್ಯಾನ್, ವಿಶ್ವನಾಥ್ ತೋನ್ಸೆ, ಸಾ.ದಯಾ, ರವೀಂದ್ರ ಎ.ಅವಿೂನ್, ಶ್ರೀನಿವಾಸ ಕಾಪು, ಮೋಹನ್ ಮಾರ್ನಾಡ್, ಚಂದ್ರಕಲಾ ಆರ್.ಸುವರ್ಣ, ಸುಮಲತಾ ವಿ.ಅವಿೂನ್ ಸದಸ್ಯರನೇಕರು ಉಪಸ್ಥಿತರಿದ್ದರು.

ಗುರುನಾರಾಯಣ ರಾತ್ರಿ ಶಾಲೆ ವಿದ್ಯಾರ್ಥಿನಿಯರು ಪ್ರಾರ್ಥನೆಗೈದರು. ಅಸೋಸಿಯೇಶನ್‍ನ ಗೌರವ ಪ್ರಧಾನ ಕಾರ್ಯದರ್ಶಿ ಧರ್ಮಪಾಲ ಜಿ.ಅಂಚನ್ ಸ್ವಾಗತಿಸಿ ಪ್ರಾಸ್ತವಿಕ ನುಡಿಗಳನ್ನಾಡಿ ಕಾರ್ಯಕ್ರಮ ನಿರೂಪಿಸಿದರು. ಸೇವಾದಳದ ದಳಪತಿ ಗಣೇಶ್ ಕೆ.ಪೂಜಾರಿ ಅಭಾರ ಮನ್ನಿಸಿದರು. ನಂತರ ಸೇವಾದಳದ ಕಾರ್ಯಕರ್ತರಿಗೆ ಕಾರ್ಯಾಧ್ಯಕ್ಷ ಶಂಕರ್ ಪೂಜಾರಿ ಅವರು ಗುರುತುಚೀಟಿ ಪ್ರದಾನಿಸಿ ಶುಭಾರೈಸಿದರು.

ಚಿತ್ರ ವರದಿ : ರೋನ್ಸ್ ಬಂಟ್ವಾಳ್

By Suddi9

Leave a Reply

Your email address will not be published. Required fields are marked *