ಮಂಗಳೂರು ಅಗಸ್ಟ್ 15: ಎಕ್ಸ್ ಪರ್ಟ್ ಕೋಚಿಂಗ್ ಕ್ಲಾಸ್ ಸಿಬಂಧಿಗಳು ಎಕ್ಸ್ ಪರ್ಟ್ ಆಡಳಿತ ವಿಭಾಗದಲ್ಲಿ ಸ್ವಾತಂತ್ರ ದಿನಾಚರಣೆಯನ್ನು ಆಚರಿಸಿದರು. ಶಾರದ ವಿದ್ಯಾಲಯದ ಅಧ್ಯಾಪಕರದ ಶ್ರೀ ಪ್ರಕಾಶ್ ನಾಯ್ಕ್ ಇವರು ದ್ವಜಾರೋಹಣ ನೆರವೇರಿಸಿ, ಡಾ. ರಿಚರ್ಡ್ ಗೊನ್ವಾಲ್ವಿಸ್,ಸಂತ ಅಲೋಶಿಯಸ್ ಕಾಲೇಜಿನ ಅಧ್ಯಾಪಕರು ಭಾರತ ದೇಶ ಸ್ವಾತಂತ್ರ್ಯ ಸಂಗ್ರಮದ ಹಿತನುಡಿಗಳನ್ನು ನೀಡಿದರು. ನೆರದವರೆಲ್ಲರು ರಾಷ್ಟಗೀತೆಯನ್ನು ಹಾಡಿ ತಮ್ಮ ದೇಶದ ಪರವಾಗಿ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದರು. ಸಂತ ಅಲೋಶಿಯಸ್ ಕಾಲೇಜಿನ ಅಧ್ಯಾಪಕರಾದ ನವೀನ್ ಮಾಸ್ಕರೇನಿಯ್ಸ್ ಕಾರ್ಯಕ್ರಮ ನಿರೂಪಿಸಿದರು. ಸಿಹಿತಿಂಡಿ ವಿತರಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.





