ಬಂಟ್ವಾಳ: ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ವ್ಯಕ್ತಿಯೋರ್ವರು ತನ್ನ ಮನೆಯ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ಶನಿವಾರ ಸಂಭವಿಸಿದೆ. ರಾಯಿ ಗ್ರಾಮದ ದಡ್ಡು ನಿವಾಸಿ ರಾಮಪ್ಪ ಪೂಜಾರಿ ಅವರ ಪುತ್ರ ಪ್ರಕಾಶ(47)ಅವರು ಆತ್ಮಹತ್ಯೆಗೈದವರು.
ಮೂಡಬಿದಿರೆಯ ಬಟ್ಟೆ ಅಂಗಡಿಯಲ್ಲಿ ಕೆಲಸಕ್ಕಿದ್ದ ಅವರು ಮಾನಸಿಕ ಅಸ್ವಸ್ಥತೆಯಿಂದ ಕೆಲವುದಿನಗಳಿಂದ ರಜೆಮಾಡಿ ಮನೆಯಲ್ಲಿದ್ದರು.ಇತ್ತೀಚೆಗೆ ಹೊಸಮನೆ ಕಟ್ಟಿಸಿದ್ದು ಮನೆಮಂದಿ ಅದರಲ್ಲಿ ವಾಸವಿದ್ದರು.ಶುಕ್ರವಾರ ರಾತ್ರಿ ಊಟದ ಬಳಿಕ ಮಲಗಿದ್ದ ಅವರು ಬೆಳಗ್ಗೆ 4 ಗಂಟೆಗೆ ಮನೆಯಲ್ಲಿ ಇರದಿರುವುದನ್ನು ಗಮನಿಸಿ ಹುಡುಕಾಡಿದಾಗ ಹಳೆಮನೆಯಲ್ಲಿ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿತ್ತು ಎಂದು ಪೆÇಲೀಸರು ತಿಳಿಸಿದ್ದಾರೆ.ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಜಿ.ಪಂ.ಸದಸ್ಯರಾದ ಎಂ.ತುಂಗಪ್ಪ ಬಂಗೇರ ಮತ್ತು ಧರಣೇಂದ್ರ ಕುಮಾರ್ ಸ್ಥಳಕ್ಕೆ ಭೇಟಿ ನೀಡಿದ್ದರು.ಮೃತರು ಪತ್ನಿ,ಪುತ್ರಿಯನ್ನು ಅಗಲಿದ್ದಾರೆ.

By Suddi9

Leave a Reply

Your email address will not be published. Required fields are marked *