ವಿಟ್ಲ: ಮಹಿಳಾ ವಿವಿದೊದ್ದೇಶ ಸಹಕಾರಿ ಸಂಘದ ಹತ್ತನೇ ವಾರ್ಷಿಕ ಮಹಾಸಭೆಯು ಸಂಘದ ವಠಾರದಲ್ಲಿ ನಡೆಯಿತು. ಸಂಘದ ಅಧ್ಯಕ್ಷೆ ಧರ್ಮಾವತಿ ಪಿ ಬಿ ಸಭಾಧ್ಯಕ್ಷತೆವಹಿಸಿ ಸಭೆ ನಡೆಸಿಕೊಟ್ಟರು. ಸಂಘದ ಕಾರ್ಯ ಚಟುವಟಿಕೆಗಳ ವರದಿಯನ್ನು ಕಾರ್ಯದರ್ಶಿ ಕವಿತಾ ಶೆಟ್ಟಿ ಮಂಡಿಸಿದರು.
ಮುಂದಿನ ವರ್ಷದ ಕಾರ್ಯಗಳ ಬಗ್ಗೆ ಚರ್ಚಿಸಲಾಯಿತು. ಸಂಘದ ನಿರ್ದೇಸಕರುಗಳಾದ ನಸೀಮ ಹಸನ್ ವಿಟ್ಲ, ಗುಣವತಿ ಪಿ ಶೆಟ್ಟಿ, ಪದ್ಮಾವತಿ ಆರ್, ಮುಕ್ತಾ ಭಟ್, ಭಾಗೀರಥಿ, ಹೇಮಲತಾ ಜೆ ಸಾಲಿಯಾನ್ ವೇದಿಕೆಯಲ್ಲಿದ್ದರು. ಉಪಾಧ್ಯಕ್ಷೆ ವಿಮಲಾ ಪಿ ಶೆಟ್ಟಿ ಸ್ವಾಗತಿಸಿದರು. ವಿಜಯಲಕ್ಷ್ಮಿ ಅರುಣ್ ವಂದಿಸಿದರು. ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.
