ಬಂಟ್ವಾಳ:ಮನೆಯೊಂದಕ್ಕೆ ಮಡ್ಡಿಎಣ್ಣೆ ಸುರಿದು ಬೆಂಕಿಕೊಟ್ಟು ಬಳಿಕ ನ್ಯಾಯಾಲಯದ ಜಾಮೀನು ಪಡೆದು ತಲೆಮರೆಸಿದ್ದ ಹಳೇ ಆರೋಪಿಯನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಆಶ್ರಫ್ ಯಾನೆ ತುಂಬೆ ಆಶ್ರಫ್ ಬಂಧಿತ ಆರೋಪಿಯಾಗಿದ್ದಾನೆ. ಸೆ. 14 ರಂದು ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದ ಶಿವಾಜಿನಗರದ ರುಕಿಯಾ ಎಂಬವರ ಮನೆಗೆ ಬೆಂಕಿ ಹಚ್ಚಿದ್ದು, ಪರಿಣಾಮ ಮನೆ ಭಾಗಶ: ಸುಟ್ಟು ಸುಮಾರು ೧೫ ಸಾವಿರ ರೂ.ನಷ್ಟ ಉಂಟಾಗಿತ್ತು.ರುಕಿಯಾ ತನ್ನ ಮಗಳನ್ನು ಅತನಿಗೆ ಮದುವೆ ಮಾಡಿಕೊಡಲಿಲ್ಲ ಎಂಬ ಕಾರಣಕ್ಕಾಗಿ ಅಶ್ರಫ್ ಈಕ್ರತ್ಯ ಎಸಗಿದ್ದ ಎಂದು ದೂರಲಾಗಿತ್ತು.

ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಕೇಸು ದಾಖಲಾಗಿತ್ತು ಈ ಸಂದಭ೯ದಲ್ಲಿ ಬಂಧಿತನಾಗಿದ್ದ ಈತ ನ್ಯಾಯಾಲಯದಲ್ಲಿ ಜಾಮೀನು ಪಡೆದು ಬಳಿಕ ಕೋಟಿ೯ಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಈತನ ಬಂಧನಕ್ಕೆ ಕೋಟ೯ ವಾರಂಟ್ ಹೊರಡಿಸಿತ್ತು. ಇದೀಗ ಅತನ ಇರುವಿಕೆ ಬಗ್ಗೆ ಸಳಿವು ಪಡೆದ ಬಂಟ್ವಾಳ ಗ್ರಾಮಾಂತರ ಠಾಣೆಯ ಎಸ್ಐ ರಕ್ಷಿತ್ ಮತ್ತವರ ತಂಡ ಡಿವೈಎಸ್ಪಿ ರವೀಶ್ ,ಸಿಐಬಿ.ಕೆ.ಮಂಜಯ್ಯರವರ ಮಾಗ೯ದಶ೯ನದಂತೆ ಶುಕ್ರವಾರ ನಡೆಸಿದ ಯಶಸ್ವಿ ಕಾಯಾ೯ಚರಣೆ ಯೊಂದರಲ್ಲಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಿದೆ.
