ಬಂಟ್ವಾಳ: ಬಿಲ್ಲವ ಮಹಿಳಾ ಸಮಿತಿ ಗಾಣದಪಡ್ಪು ಇದರ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಸಭಾ ಭವನದಲ್ಲಿ ಬಿಲ್ಲವ ಸಮಾಜ ಸೇವಾ ಸಂಘದ ಸಹಕಾರದೊಂದಿಗೆ ಸಾಮೂಹಿಕ “ಶ್ರೀ ವರಮಹಾಲಕ್ಷ್ಮೀ ವೃತಾಚರಣೆಯು “ಲೋಕೇಶ್ ಶಾಂತಿ ಇವರ ಪೌರೋಹಿತ್ಯದಲ್ಲಿ ಜರಗಿತು.
ಸಂಘದ ಅಧ್ಯಕ್ಷ ಸೇಸಪ್ಪ ಕೋಟ್ಯಾನ್, ಬಿಲ್ಲವ ಮಹಾಮಂಡಲದ ವಕ್ತಾರ ಹರಿಕೃಷ್ಣ ಬಂಟ್ವಾಳ್, ಮಹಿಳಾ ಸಮಿತಿ ಅಧ್ಯಕ್ಷೆ ಭಾರತಿ ಕುಂದರ್ , ಉಪಾಧ್ಯಕ್ಷೆ ಜಯಂತಿ, ಕಾರ್ಯದರ್ಶಿ ಚಂದ್ರಾವತಿ, ಕೋಶಾಧಿಕಾರಿ ದೇವಕಿ, ಜತೆಕಾರ್ಯದರ್ಶಿ ನಳಿನಿ, ಲೆಕ್ಕಪರಿಶೋಧಕಿ ವನಿತಾ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
