ಬಂಟ್ವಾಳ:ತಾಲ್ಲೂಕಿನ ತುಂಬೆ ನಿವಾಸಿ, ಇಲ್ಲಿನ ಕುಡಿಯುವ ನೀರು ಸರಬರಾಜು ವಿಭಾಗ ಉದ್ಯೋಗಿ ವೈ.ಚಂದ್ರಶೇಖರ ಪೂಜಾರಿ (55) ಇವರು ಅಸೌಖ್ಯದಿಂದ ಭಾನುವಾರ ಸ್ವಗೃಹದಲ್ಲಿ ನಿಧನರಾದರು. ಮೃತರಿಗೆ ಪತ್ನಿ, ಪುತ್ರ ಮತ್ತು ಇಬ್ಬರು ಪುತ್ರಿಯರು ಇದ್ದಾರೆ. ಕಳೆದ 30ವರ್ಷಗಳಿಂದ ಮಂಗಳೂರು ಮಹಾನಗರ ಪಾಲಿಕೆ ಮತ್ತು ತುಂಬೆ ಕುಡಿಯುವ ನೀರು ಸರಬರಾಜು ವಿಭಾಗದಲ್ಲಿ ದುಡಿಯುತ್ತಿದ್ದರು.
