ಬಂಟ್ವಾಳ: ಇತ್ತೀಚೆಗೆ ಅಡುಗೆಗೆಂದು ಹಚ್ಚಿದ ಬೆಂಕಿ ಮನೆಯನ್ನೇ ಭಸ್ಮವಾಗಿಸಿದ ಘಟನೆಯೊಂದು ತಾಲೂಕಿನ ಕಲ್ಲಡ್ಕ ಸಮೀಪದ ಕುದ್ರೆಬೆಟ್ಟುವಿನಲ್ಲಿ ಹಾಡುಹಗಲೇ ನಡೆದು ನಿವಾಸಿ ಸೀತಾರಾಮ ಎಂಬವರ ಮನೆ ಸಂಪೂರ್ಣ ಸುಟ್ಟು ಹೋಗಿದ್ದು, ಸುಮಾರು 15 ಲಕ್ಷ ರೂ ನಷ್ಟ ಸಂಭವಿಸಿತ್ತು. ಅವರ ಮನಗೆ ಬಿಜೆಪಿ ಮುಖಂಡ ಉಳಿಪ್ಪಾಡಿಗುತ್ತು ರಾಜೇಶ್ ನಾಯಕ್ ಬೇಟಿ ನೀಡಿ ಮನೆಯವರಿಗೆ ಶಾಂತ್ವನ ನೀಡಿ, ಮನೆ ನಿರ್ಮಾಣಕ್ಕೆ ವ್ಯಯಕ್ತಿಕ ಧನ ಸಹಾಯ ನೀಡಿದರು. ಮಾಜಿ ಜಿ.ಪಂ.ಸದಸ್ಯ ಚೆನ್ನಪ್ಪ ಕೋಟ್ಯಾನ್,ಮಾಜಿ ತಾ.ಪಂ.ಸದಸ್ಯ ದಿನೇಶ್ ಅಮ್ಟೂರು, ಪುಷ್ಪರಾಜ ಔಟ, ಕೃಷ್ಣಪ್ಪ ಪೂಜಾರಿ, ಕೇಶವ , ಪವನ್ ಕುಮಾರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *