ಮೂಡುಬಿದಿರೆ: ಮಿಜಾನಲ್ಲಿರುವ ಆಳ್ವಾಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ 2016-17ನೇ ಶೈಕ್ಷಣಿಕ ವರ್ಷದ ಪ್ರಥಮ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಪ್ರಶಿಕ್ಷಣ ಕಾರ್ಯಕ್ರಮ ಬುಧವಾರ ನಡೆಯಿತು.
ಟಾಟಾ ಕನ್ಸಸ್ಟೆನ್ಸಿ ಸರ್ವಿಸಸ್ (ಟಿ.ಸಿ.ಎಸ್) ಬೆಂಗಳೂರು ಇದರ ಮುಖ್ಯ ಕೇಂದ್ರ ಸಂಚಾಲಕ ಮಿಸ್ಟರ್ ಚಕ್ರವರ್ತಿ ಇ.ಎಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, `ಮುಂದಿನ ದಿನಗಳಲ್ಲಿ ನಮ್ಮ ದೇಶಕ್ಕೆ ನುರಿತ ಎಂಜಿನಿಯರ್‍ಗಳ ಅವಶ್ಯಕತೆಯಿದೆ. ಕೌಶಲ್ಯವನ್ನು ಹೊಂದಿರುವ ಇಂಜಿನಿಯರ್ ಕ್ಷೇತ್ರದಲ್ಲಿ ವಿಫುಲ ಅವಕಾಶವಿದೆ ಎಂದರು.

mbd_aug5_1(a)

mbd_aug5_1
ಆಳ್ವಾಸ್ ಶಿಕ್ಷಣ ಪ್ರತಿಷ್ಟಾನದ ಟ್ರಸ್ಟಿ ವಿವೇಕ್ ಆಳ್ವ, ಬೆಂಗಳೂರಿನ ಟಿ.ಸಿ.ಎಸ್ ಶೈಕ್ಷಣಿಕ ಮುಖ್ಯಸ್ಥ ಶ್ರೀನಿವಾಸ ರಾಮಾನುಜಂ, ಉದ್ಯೋಗ ನೇಮಕಾತಿ ಮುಖ್ಯಸ್ಥ ಬೆಂಜಿನ್ ಸ್ಯಾಮುವೆಲ್ ಉಪಸ್ಥಿತರಿದ್ದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅದ್ಯಕ್ಷ ಡಾ. ಮೊಹನ್ ಆಳ್ವ ಅದ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳ ಪೋಷಕರು ಸಾಕಷ್ಟು ಭರವಸೆಯಿಟ್ಟು ದಾಖಲಾತಿ ಮಾಡಿರುತ್ತಾರೆ. ನಾವು ನಮ್ಮ ಸಂಸ್ಥೆಗಳಲ್ಲಿ ಪ್ರತಿ ವಿದ್ಯಾರ್ಥಿಗಳ ಯೋಗ ಕ್ಷೇಮ ನೋಡಿಕೊಂಡು ವಿದ್ಯಾರ್ಥಿಗಳ ಶಿಕ್ಷಣದ ಜತೆ ದೇಶಕ್ಕೆ ಉತ್ತಮ ನಾಗರಿಕರನ್ನಾಗಿಸುತ್ತೇವೆ ಎಂದರು. ಪ್ರಾಂಶುಪಾಲ ಡಾ. ಪೀಟರ್ ಪೆರ್ನಾಂಡಿಸ್ ಕಾಲೇಜಿನ ವಾರ್ಷಿಕ ವರದಿ ವಾಚಿಸಿದರು. ಕಂಪ್ಯೂಟರ್ ಸೈನ್ಸ್ ವಿಭಾಗ ಮುಖ್ಯಸ್ಥ ಪ್ರೊ. ಮಂಜುನಾಥ ಕೊಠಾರಿ ಸ್ವಾಗತಿಸಿದರು. ಸಿವಿಲ್ ಎಂಜಿನಿಯರಿಂದ  ಪ್ರೊ. ದುರ್ಗಾಪ್ರಸಾದ್ ಬಾಳಿಗ ವಂದಿಸಿದರು.

By suddi9

Leave a Reply

Your email address will not be published. Required fields are marked *