ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಬಿವೃದ್ಧಿ ಯೋಜನೆ ಬಂಟ್ವಾಳ ತಾಲೂಕು ಬಿ ಒಕ್ಕೂಟದ ಪದಾಧಿಕಾರಿಗಳ ತಂಡ ಶ್ರೀ ಕ್ಷೇತ್ರಕ್ಕೆ ಬೇಟಿ ನೀಡಿ ದೇವರ ದರ್ಶನ ಪಡೆದು ಪೂಜ್ಯ ಖಾವಂದರ ಆಶೀರ್ವಾದ ಪಡೆದರು. ಖಾವಂದರು ಮಾರ್ಗದರ್ಶನ ನೀಡಿದರು. ತಂಡದಲ್ಲಿ ಅಧ್ಯಕ್ಷ ನೆಗಳಗುಳಿ ಸುಂದರ ಆಚಾರ್ಯ, ಕಾರ್ಯದರ್ಶಿ ನಾರಾಯಣ ಗೌಡ, ಉಪಾಧ್ಯಕ್ಷೆ ಪ್ರೇಮಾ ಆರ್ ಹೆಗ್ಡೆ, ಜೊತೆ ಕಾರ್ಯದರ್ಶಿ ಗಣೇಶ್ ಹಾಗೂ ಕೋಶಾಧಿಕಾರಿ ವಿಮಲ ಇದ್ದರು.
