ಮೂಡುಬಿದಿರೆ: ನೆಲ್ಲಿಕಾರು ಗ್ರಾಮದ ಪೆರ್ನೋಡಿ ಎಂಬಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದ ಜೋಗಿ ಕೊರಗ(80) ಎಂಬವರನ್ನು ಕೊರಗ ಸಮುದಾಯದ ಅಧ್ಯಕ್ಷ ಸಂಜೀವ ಅವರ ನೇತೃತ್ವ, ಸ್ಥಳೀಯರ ಸಹಕಾರದೊಂದು ದೇರಳಕಟ್ಟೆ-ಕೊಣಾಜೆ ಕೊರಗ ಸಮುದಾಯದ ಅಭಯ ಆಶ್ರಮ ನಿರಾಶ್ರಿತರ ಕೇಂದ್ರಕ್ಕೆ ಬಿಡಲಾಯಿತು.
ಜೋಗಿ ಕೊರಗ ಅವರು ಅವಿವಾಹಿತರಾಗಿದ್ದು, ಪೆರ್ನೋಡಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ಒಬ್ಬಂಟಿಯಾಗಿ ಜೀವನ ಸಾಗಿಸುತ್ತುದ್ದರು. ಸ್ಥಳೀಯ ಶಂಕರ್ ಭಟ್ ಅವರು ಜೋಗಿಯವರ ಯೋಗ ಕ್ಷೇಮ ವಿಚಾರಿಸುತ್ತಿದ್ದು, ಅವರ ಊಟೋಪಚಾರ ಸಹಿತ ಹಲವಾರು ವಿಧದಲ್ಲಿ ನೆರವಾಗುತ್ತಿದ್ದರು. ಆದರೆ ಕೆಲವು ತಿಂಗಳಿನಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಜೋಗಿ ಅವರನ್ನು ನಿರಾಶ್ರಿತ ಕೇಂದ್ರಕ್ಕೆ ಐಟಿಡಿಪಿಯವರ ಅಧಿಕಾರಿಗಳು ಮಂಗಳವಾರ ನಿರಾಶ್ರುತ ಕೇಂದ್ರಕ್ಕೆ ಕರೆದುಕೊಂಡು ಹೋದರು.

ಮೂಡುಬಿದಿರೆ ಲಯನ್ಸ್ ಕ್ಲಬ್ ಅಧ್ಯಕ್ಷ ರುಕ್ಕಯ್ಯ ಪೂಜಾರಿ, ನೆಲ್ಲಿಕಾರು ಗ್ರಾಮದ ಸದಸ್ಯರಾದ ಹರೀಶ್ ಆಚಾರ್ಯ ,ಶಶಿಧರ ಮಾಂಟ್ರಾಡಿ, ಸುಂದರ ಪೂಜಾರಿ, ಶಿರ್ತಾಡಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಜಕ್ರಿ ಯೂಸೂಫ್ ಮೂಡುಕೊಣಾಜೆ, ಪಾಶ್ರ್ವನಾಥ ಜೈನ್, ಸುದತ್ತ ಜೈನ್ ಶಿರ್ತಾಡಿ ಉಪಸ್ಥಿತರಿದ್ದರು.
—-
—

