ಸುದ್ದಿ9 ಕೈಕಂಬ: ಮಳಲಿ ಕೊಲ್ಲಬೆಟ್ಟು ನಿವಾಸಿ ಗೀತಾ ಅವರ ಮನೆಕಾಮಗಾರಿ ಪೂರ್ತಿ ಗೊಳಿಸಲು ವೀರಾಂಜನೇಯ ಬಜರಂಗದಳ ಶಾಖೆ ಮಳಲಿ ಇದರ ವತಿಯಿಂದ ಆರ್ಥಿಕ ಧನ ಸಹಾಯವನ್ನು ಬುಧವಾರ ವೀರಾಂಜನೇಯ ಭಜನಾ ಮಂಡಳಿ ಇಲ್ಲಿ ವಿತರಿಸಲಾಯ್ತು.
ಬಡ ಕುಟುಂಬದಿಂದ ಬಂದಿರುವ ಗೀತಾ ಅವರು ಮನೆಕಟ್ಟುತ್ತಿದ್ದು ಆಥರ್ಿಕ ಅಡಚಣೆಯಿಂದ ನಿಂತುಹೋಗಿತ್ತು. ಇವರು ಪಾಪೆಮಾರ್ ಎಂಬಲ್ಲಿ ಮನೆ ನಿರ್ಮಿಸುತ್ತಿದ್ದರು. ಆದರೆ ಇವರ ಗಂಡ ಇತ್ತೀಚೆಗೆ ಅಕಾಲಿಕ ಮರಣವನ್ನಪ್ಪಿದ್ದು ಮನೆಕಾಮಗಾರಿ ಅರ್ಧದಲ್ಲೇ ನಿಂತಿತ್ತು, ಇದನ್ನು ಮನಗಂಡ ಬಜರಂಗದಳದ ಸದಸ್ಯರು ಹಣ ಸಂಗ್ರಹಿಸಿ ಅವರಿಗೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಓಂ ದಾಸ್, ಬಾಲಕೃಷ್ಣ, ರಾಜೇಶ್ ಭಜರಂಗ ಶಾಖೆಯ ಹಲವಾರು ಸದಸ್ಯರು ಉಪಸ್ಥಿತರಿದ್ದರು.

