ಕೈಕಂಬ: ಸಿಬಿಐ ಎಂದು ವಂಚಿಸಿದ್ದ ನಕಲಿ ಸಿಬಿಐ ಅಧಿಕಾರಿಯನ್ನು ಸ್ಥಳೀಯರು ಕಾಯರ್ಾಚರಣೆ ನಡೆಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ನಕಲಿ ಸಿಬಿಐ ಅಧಿಕಾರಿಯನ್ನ ವಾಮಂಜೂರು ಸಮೀಪದ ಮಹಮ್ಮದ್ ಶೆರೀಫ್ ಎಂದು ಗರುತಿಸಲಾಗಿದೆ.

sharif
ಸುಮಾರು ಎರಡು ದಿನಗಳ ಹಿಂದೆ ಬಜ್ಪೆ ಸಮೀಪದ ಜೆರಿನಗರದ ನಿವಾಸಿ ಅನ್ಸರ್ ಎಂಬವರನ್ನು ಸಂಜೆ ವೇಳೆ ನಾಲ್ವರ ತಂಡ ನಾವು ಸಿಬಿಐನವರು ನಿಮ್ಮ ಮೇಲೆ ಕೇಸಿದೆ ಎಂದು ಹೇಳಿ ನಕಲಿ ಐಡಿ ತೋರಿಸಿದ್ದರು. ಆದರೆ ಅನ್ಸರ್ ನಾವು ಪೊಲೀಸರಿಗೆ ತಿಳಿಸುತ್ತೇವೆ ಎಂದಾಗ ಪೊಲೀಸರೇ ನಿಮ್ಮನ್ನು ಬಂಧಿಸುವಂತೆ ಹೇಳಿದ್ದಾರೆಂದು ತಿಳಿಸಿದ್ದಾರೆ.
ಇದಕ್ಕೂ ಒಪ್ಪದ ಅನ್ಸರ್ ಅವರನ್ನು ಹೆದರಿಸಿದ ತಂಡ ನಿಮ್ಮ ಮೇಲೆ ಕೇಸ್ ಹಾಕುತ್ತೇವೆ, ನಿಮ್ಮ ಮೇಲೆ ಆಸಿಡ್ ಎರಚಿ, ಏಡ್ಸ್ನ ಚುಚ್ಚುಮದ್ದು ನೀಡುತ್ತೇವೆ ಎಂದು ಬೆದರಿಸಿದ್ದಾರೆ. ಕೊನೆ ಡೀಲ್ಗೆ ಇಳಿದ ತಂಡ ಇಂತಿಷ್ಟು ಹಣ ಕೊಡುವಂತೆ ತಿಳಿಸಿದೆ. ಇದಕ್ಕೆ ಒಪ್ಪಿದ ಅನ್ಸರ್ 50 ಸಾವಿರ ಹಣ ಕೊಡಲು ಒಪ್ಪಿದ್ದು ಇದರ 25 ಸಾವಿರ ಹಣವನ್ನು ಮಂಗಳವಾರ ನೀಡಿದರೆ ಇನ್ನೊಂದು ಕಂತನ್ನು ಎರಡು ದಿನಗಳ ನಂತರ ಕೊಡುತ್ತೇವೆ ಎಂದು ಹೇಳಿದ್ದರು.
ಇದರಂತೆ ಮಂಗಳವಾರ ಅನ್ಸರ್ ಮನೆಗೆ ಬಂದಿದ್ದ ತಂಡವನ್ನು ನೋಡಿದ ಸ್ಥಳೀಯರು ಹಿಡಯಲು ಯತ್ನಿಸಿದ್ದು ಈ ಪೈಕಿ ಮೂವರು ತಪ್ಪಿಸಿದರೆ ಶೆರೀಫ್ ಸಿಕ್ಕಿಬಿದ್ದಿದ್ದಾನೆ. ಈತನಿಗೆ ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ತನ್ನೊಂದಿಗೆ ಸಲಾಂ, ಶಮರ್ಾ, ಹಮೀದ್ ಒಟ್ಟು ನಾಲ್ಕು ಮಂದಿ ಇದ್ದರು ಎಂದು ಶೆರೀಪ್ ಹೇಳಿದ್ದಾನೆಂದು ತಿಳಿದುಬಂದಿದೆ. ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಧರ್ಮದೇಟು ತಿಂದ ಆರೋಪಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.

By suddi9

Leave a Reply

Your email address will not be published. Required fields are marked *