ಬಂಟ್ವಾಳ:ಪ್ರಸಕ್ತ ಸಮಾಜದಲ್ಲಿ ಸರ್ಕಾರದ ಶೈಕ್ಷಣಿಕ ಮೀಸಲಾತಿ ಸಹಿತ ವಿವಿಧ ಸೌಲಭ್ಯಗಳಿಂದ ದುರ್ಬಲ ವರ್ಗದ ಸಮಾಜ ಕೂಡಾ ಸ್ವಾವಲಂಬನೆ ಬದುಕು ಮತ್ತು ಶೋಷಣೆಮುಕ್ತ ಸಮಾಜ ನಿರ್ಮಿಸಲು ಸಾಧ್ಯವಿದೆ. ಇದಕ್ಕಾಗಿ ಪ್ರತಿಯೊಂದು ಸಮುದಾಯ ಕೂಡಾ ಸ್ವಂತ ಶಿಕ್ಷಣ ಸಂಸ್ಥೆ ಮತ್ತು ಆರ್ಥಿಕ ಸಹಕಾರಿ ಸಂಸ್ಥೆ ಮುನ್ನಡೆಸುವ ಮೂಲಕ ಸಮಾಜವನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಅನುಕೂಲವಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಮಾನಾಥ ರೈ ಹೇಳಿದರು.

ತಾಲ್ಲೂಕಿನ ಗಾಣಿಗರ ಸೇವಾ ಸಂಘದ ವತಿಯಿಂದ ಪಾಣೆಮಂಗಳೂರಿನ ಸುಮಂಗಲಾ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ವಿದ್ಯಾರ್ಥಿ ಪ್ರೋತ್ಸಾಹಧನ ವಿತರಣೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ಮ ಉದ್ಘಾಟಿಸಿ ಅವರು ಮಾತನಾಡಿದರು. ಯಾವುದೇ ಆಸ್ತಿ ಮತ್ತು ಅಂತಸ್ತಿಗೆ ಮಿಗಿಲಾಗಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಸಮಾಜ ಬೆಳೆದು ಬಂದ ಬಗ್ಗೆ ಇತಿಹಾಸ ತಿಳಿಸಬೇಕು ಎಂದರು.
ಸಂಘದ ಅಧ್ಯಕ್ಷ ಬಿ.ರಘು ಸಪಲ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘಟಿತ ಸಮಾಜ ನಿರ್ಮಿಸುವಲ್ಲಿ ಎಲ್ಲರ ಶ್ರಮ ಅಗತ್ಯವಿದೆ ಎಂದರು.
ಸಂಸದ ನಳಿನ್ ಕುಮಾರ್ ಕಟೀಲು, ಸಂಘದ ಜಿಲ್ಲಾಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್, ಸುಮಂಗಲಾ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಎಂ.ನಾರಾಯಣ ಸಪಲ್ಯ, ಉದ್ಯಮಿಗಳಾದ ಎ.ಕೆ.ಸುಂದರ ಸಾಲ್ಯಾನ್, ಮಾಧವ ಎಸ್. ಮಾವೆ, ಜನಾರ್ದನ ಸಪಲ್ಯ ಅರ್ಕುಳ, ಕೊಣಾಜೆ ಪೋಲೀಸ್ ವೃತ್ತ ನಿರೀಕ್ಷಕ ಅಶೋಕ ಫಜೀರು, ಎಂಜಿನಿಯರ್ ಪ್ರೇಮ್ ಸಾಲಿಯಾನ್, ಕೆಡಿಸಿ ಸದಸ್ಯ ಉಮೇಶ್ ಬೋಳಂತೂರು, ಸ್ಥಳೀಯ ತಾಲ್ಲೂಕು ಪಂಚಾಯಿತಿ ಸದಸ್ಯೆ ಗಾಯತ್ರಿ ರವೀಂದ್ರ ಸಪಲ್ಯ ಮತ್ತಿತರರು ಶುಭ ಹಾರೈಸಿದರು.
ಇದೇ ವೇಳೆ ಪ್ರಶಸ್ತಿ ಪುರಸ್ಕøತ ಪ್ರಗತಿಪರ ಕೃಷಿಕರಾದÀ ಟಿ. ಸುಧಾಕರ ಸಪಲ್ಯ, ಜಯಂತ ಸಪಲ್ಯ ಇಡ್ಕಿದು, ಯಕ್ಷಗಾನ ಕಲಾವಿದ ಪ್ರೇಮ್‍ರಾಜ್ ಕೊಯಿಲ, ಕ್ರೀಡಾ ಪ್ರತಿಭೆ ಜಯಲಕ್ಷ್ಮಿ, ಇನ್ಸ್‍ಪೆಕ್ಟರ್ ಅಶೋಕ್ ಫಜೀರು, ಜನಪ್ರತಿನಿಧಿಗಳಾದ ಗಾಯತ್ರಿ ರವೀಂದ್ರ ಸಪಲ್ಯ, ರವಿ ಪ್ರಕಾಶ್ ವಿಟ್ಲ ಇವರನ್ನು ಸನ್ಮಾನಿಸಲಾಯಿತು.
ಸಂಘದ ಕೋಶಾಧಿಕಾರಿ ಈಶ್ವರ ಎಂ. ಮೆಲ್ಕಾರ್, ಉಪಾಧ್ಯಕ್ಷರಾದ ತಿಮ್ಮಪ್ಪ ಸಪಲ್ಯ ಇಡ್ಕಿದು, ವಸಂತಿ ಗಂಗಾಧರ, ಪೂವಪ್ಪ ದರಿಬಾಗಿಲು, ಜೊತೆ ಕಾರ್ಯದರ್ಶಿ ಬಾಲಕೃಷ್ಣ ಸೆರ್ಕಳ, ಅಶೋಕ್ ಬರಿಮಾರು ಮತ್ತಿತರರು ಇದ್ದರು.
ಸಂಘದ ಪ್ರಧಾನ ಕಾರ್ಯದರ್ಶಿ ವೇದವ ಗಾಣಿಗ ಸ್ವಾಗತಿಸಿ, ಸುಮಂಗಲಾ ಕ್ರೆಡಿಟ್ ಸೊಸೈಟಿ ನಿರ್ದೇಶಕ ಗಣೇಶ ಫಜೀರು ವಂದಿಸಿದರು. ಮಾಜಿ ನಿರ್ದೇಶಕ ಮೋಹನ್ ಕೆ. ಶ್ರೀಯಾನ್ ರಾಯಿ ಕಾರ್ಯಕ್ರಮ ನಿರೂಪಿಸಿದರು.
