.ಬಂಟ್ವಾಳ: ಗೋಳ್ತಮಜಲು ಸಾರ್ವಜನಿಕ ಶ್ರೀ ಗಣೇಶೋತ್ಸವವು ಈ ಬಾರಿ ರಜತಮಹೋತ್ಸವವನ್ನು ಆಚರಿಸುತ್ತಿದ್ದು ಇದರ ಆಮಂತ್ರಣ ಪತ್ರ ಬಿಡುಗಡೆ ಸಮಾರಂಭ ಭಾನುವಾರ ಬೆಳಿಗ್ಗೆ ಗೋಳ್ತಮಜಲಿನ ಗಣೇಶಮಂದಿರದಲ್ಲಿ ನಡೆಯಿತು.
ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟರಿ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ಅವರು ಭಜನೆಯಿಂದ ಜೀವನದಲ್ಲಿ ಉತ್ತಮ ಸಂಸ್ಕಾರಗಳನ್ನು ಪಡೆಯಲು ಸಾಧ್ಯವಿದೆ. ಭಜನೆಯಿಂದಲೇ ಇಲ್ಲಿನ ಸಾರ್ವಜನಿಕ ಗಣೇಶೋತ್ಸವವೂ ಕೂಡ ಆರಂಭಗೊಂಡಿದೆ ಎಂದರು. ಯುವಕರ ಉತ್ಸಾಹದಿಂದಾಗಿ ಗಣೇಶೋತ್ಸವ ಇಪ್ಪತ್ತೈದು ವರ್ಷಗಳನ್ನು ಪೂರೈಸುತ್ತಿದ್ದು ದೇವರ ಅನುಗ್ರಹದಿಂದ ಯಶಸ್ವಿ ಕಾರ್ಯಕ್ರಮ ನಡೆಯಲಿ ಎಂದು ಶುಭಹಾರೈಸಿದರು.

ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷ ಜಿ.ಶ್ಯಾಮ್ ಭಟ್ ದೀಪ ಪ್ರಜ್ವಲಿಸಿದರು. ಅಧ್ಯಕ್ಷ ಗೋಪಾಲ್‍ಭಟ್, ಬಿಜೆಪಿ ಎಸ್ಸಿ ಮೋರ್ಛದ ಜಿಲ್ಲಾಧ್ಯಕ್ಷ ದಿನೇಶ್ ಅಮ್ಟೂರು, ಜಿ.ಪಂ.ಮಾಜಿ ಸದಸ್ಯ ಚೆನ್ನಪ್ಪ ಕೋಟ್ಯಾನ್, ರಜತಮಹೋತ್ಸವ ಸಮಿತಿ ಅಧ್ಯಕ್ಷ ಮಹಾಬಲ ಆಳ್ವ, ಉದ್ಯಮಿ ಡಾ.ಶರತ್ ಆಳ್ವ ಮತ್ತಿತರ ಪ್ರಮುಖರು ಹಾಜರಿದ್ದರು. ಗಣೇಶೋತ್ಸವ ಸಮಿತಿ ಪ್ರಧಾನಕಾರ್ಯದರ್ಶಿ ಚಂದ್ರಶೇಖರ ಟೈಲರ್ ಸ್ವಾಗತಿಸಿ, ರಜತಮಹೋತ್ಸವ ಕಾರ್ಯದರ್ಶಿ ರವೀಶ್ ಆಚಾರ್ಯ ವಂದಿಸಿದರು. ಪ್ರಧಾನಕಾರ್ಯದರ್ಶಿ ಮೋನಪ್ಪ ದೇವಸ್ಯ ಕಾರ್ಯಕ್ರಮ ನಿರೂಪಿಸಿದರು.
