ಮಂಗಳೂರು: ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ ದೇವರು ಕೊಟ್ಟ ಉಡುಗೊರೆಯನ್ನು ಜೋಪಾನವಾಗಿ ಸಂರಕ್ಷಣೆ ಮಾಡಿದರೆ ಮಾತ್ರ ದೇವರು ನಮ್ಮಲ್ಲಿ ಕರುಣೆ ತೋರುತ್ತಾನೆ …ಪರಿಸರ ನಾಶದಿಂದ ಪ್ರಳಯ ಹಾಗೂ ಸುನಾಮಿಯಂತಹ ಅನಾಹುತಗಳನ್ನು ನಾವು ಅನುಭವಿಬೇಕಾಗುತ್ತದೆ ಹಾಗಾಗಿ ನಾವೆಲ್ಲರೂ ಕನಿಷ್ಠ ನಮ್ಮ ಮನೆಯ ಹಿತ್ತಲಲ್ಲಿ ಆರೋಗ್ಯಕ್ಕೆಉಪಯುಕ್ತವಾದ ಗಿಡಮರಗಳನ್ನು ನೆಟ್ಟು ತಮ್ಮ ಹಾಗೂ ಪರಿಸರದ ಆರೋಗ್ಯವನ್ನು ಕಾಪಾಡಿಕೊಂಡು ಬರಬೇಕು ಹಾಗೂ ನಮ್ಮ ನಂತರದ ಪೀಳಿಗೆಯನ್ನು ಬದುಕಲು ಅವಕಾಶ ನೋಡಬೇಕು ಎಂದು ತುರವೇ ಸ್ಥಾಪಕಾಧ್ಯಕ್ಷರಾದ ಶ್ರೀ ಯೋಗೀಶ್ ಶೆಟ್ಟಿ ಜಪ್ಪು ಹೇಳಿದರು.DSC_0818

DSC_0814

ಅವರು ನಗರದ ಹೂಡ್ ಲ್ಯಾಂಡ್ ಹೋಟೇಲ್ನಲ್ಲಿ ಜು.31 ರಂದು ಭಾನುವಾರ ತುಳುನಾಡ ರಕ್ಷಣಾ ವೇದಿಕೆಯ ವತಿಯಿಂದ ನಡೆದ ವನಮಹೋತ್ಸವದ ಪ್ರಯುಕ್ತ ಪರಿಸರ ರಕ್ಷಣೆ ಹಾಗೂ ಆರೋಗ್ಯದ ಕುರಿತು ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾದ್ಯಕ್ಷರಾದ ಹಮೀದ್ ಹಸನ್ ಮಾಡೂರು , ಆನಂದ್ ಅಮೀನ್ ಅಡ್ಯಾರ್ , ಸಿರಾಜ್ ಅಡ್ಕರೆ ,ಜೆ ಇಬ್ರಾಹಿಮ್, ರಕ್ಷಿತ್ ಕೆ ಬಂಗೇರ, ರಶೀದ್ ಜಪ್ಪು, ರಾಜೇಶ್ ಕುತ್ತಾರ್, ರಾಜೇಂದ್ರ, ತಾರಾನಾಥ ಜತ್ತನ್ನ ,ನೇಮು ಕೊಟ್ಟಾರಿ,ಶಕೀಲ್ ಅಡ್ಕರೆ ಮುಂತಾದವರು ಉಪಸ್ಥಿತರಿದ್ದರು.ಸಿರಾಜ್ ಅಡ್ಕರೆ ಸ್ವಾಗತಿಸಿ ,ಪ್ರಶಾಂತ್ ರಾವ್ ಕಡಬ ಧನ್ಯವಾದಗೈದರು ಹರೀಶ್ ಕುಮಾರ್ ಶೆಟ್ಟಿನಿರ್ವಹಿಸಿದರು.

By Suddi9

Leave a Reply

Your email address will not be published. Required fields are marked *