ಮಂಗಳೂರು: ತುಳುನಾಡಿನ ಆಟಿ ಹಬ್ಬ, ಆಚರಣೆ, ಸಂಪ್ರದಾಯ, ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಿಳಿಯಪಡಿಸುವುದು ಅಗತ್ಯವಿದೆ ಹಿಂದಿನ ಕಾಲದ ಜನರು ತಮ್ಮ ಸಮಸ್ಯೆ, ಸವಾಲುಗಳನ್ನು ಪರಿಹರಿಸಿಕೊಳ್ಳಲು ಪ್ರಕೃತಿ ಸಹಜವಾದ ಆಹಾರ ಪದ್ದತಿಗಳನ್ನು ಹಾಗೂ ದೇಸಿ ಜೀವನಪದ್ದತಿಯನ್ನು ಉಳಿಸುವ ನಿಟ್ಟಿನಲ್ಲಿ ಆಟಿಯನ್ನು ಸಾಮಾಹಿಕವಾಗಿ ಆಚರಿಸುವುದು ಇಂದಿಗೂ ಪ್ರಸ್ತುತ ಎಂದ ಅವರು ಆಟಿ ತಿಂಗಳು ಅಶುಭ, ಅಪಶಕುನ, ಅಶುದ್ದ ತಿಂಗಳು ಎನ್ನುವ ಕಲ್ಪನೆ ಸಮಂಜಸವಲ್ಲ. ಬದಲಿಗೆ ಅದೊಂದು ಬರಗಾಲವಿದ್ದ ಕಾಲ ಅದಾಗಿತ್ತು. ಆಟಿ ಕೂಟದ ಮೂಲಕ ಔಷಧೀಯ ಗುಣಗಳುಳ್ಳ ಸೊಪ್ಪುಗಳಿಂದ ಮಾಡಿದ ಆಹಾರದ ಮಹತ್ವವನ್ನು ಪ್ರತಿಯೊಬ್ಬರ ಮನೆಗಳಿಗೂ ತಲುಪಿಸುವ ಕೆಲಸವನ್ನು ಸಾಯಿ ಟ್ರಸ್ಟ್ ನ ವತಿಯಿಂದ ನಡೆಯಲಿ ಎಂದು ಪತ್ತುಮುಡಿ ಸೌದ ಜನತಾ ಡಿಲೆಕ್ಸ್ ಇದರ ಮಾಲಕ ಸೂರ್ಯನಾರಾಯಣ ರಾವ್ ಹೇಳಿದರು.ಅವರು ಬೋಳಾರ ಸಾಯಿ ಟ್ರಸ್ಟ್ ಇದರ ವತಿಯಿಂದ ಜು.31ರಂದು ಭಾನುವಾರ ರಮಾಲಕ್ಷ್ಮೀನಾರಯಣ ಹಾಲ್ ನಲ್ಲಿ ಜರಗಿದ ” ಆಟಿದ ಚಾವಡಿ” ಕಾರ್ಯಕ್ರಮವನ್ನು ಹಿಂಗಾರ ಅರಳಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. 
ಇಬ್ಬರು ಕ್ರಷಿಕರಿಗೆ ಸನ್ಮಾನ
ಈ ಸಂದರ್ಭದಲ್ಲಿ ಕ್ರಷಿ ಕಾರ್ಯದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ ಇಬ್ಬರು ಕ್ರಷಿ ನಿರತರನ್ನು ಸನ್ಮಾನಿಸಲಾಯಿತು. ಬಂಟ್ವಾಳ ತಾಲೂಕಿನ ಅಮ್ಮೂಂಜೆ ಗ್ರಾಮದ ಕಣಿಯೂರು ನಿವಾಸಿ ಭವಾನಿ ಹಾಗೂ ಉಡುಪಿ ತಾಲೂಕಿನ ಬೆಳಪು ಗ್ರಾಮದ ಮಲಂಗುಳಿ ಪಡುಬೆಟ್ಟು ನಿವಾಸಿ ಹರೀಶ್ ಉಡುಪ ಇವರುಗಳನ್ನು ಸಾಯಿ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು.
ಅಧ್ಯಕ್ಷತೆಯನ್ನು ಜೋತಿಷ್ಯ ವಾಸ್ತು ತಜ್ಙ ರಾದ ವಿಜಯರಾಜ್ ವಹಿಸಿದ್ದರು. ವೇದಿಕೆಯಲ್ಲಿ ಗಂಧಕಾಡು ಪದವಿನಂಗಡಿ ದೈವಪಾತ್ರಿ ಭಾಸ್ಕರ, ರಮಾಲಕ್ಷ್ಮೀನಾರಾಯಣ ಹಾಲ್ ಇದರ ಮಾಲಕಿ ಕಾವ್ಯ ಪಿ ಶೆಟ್ಟಿ , ಸಮಾಜ ಸೇವಕಿ ಪ್ರಸನ್ನಕೊಂಚಾಡಿ ಮತ್ತಿತರರು ಉಪಸ್ಥಿತರಿದ್ದರು.ಸಾಯಿ ಟ್ರಸ್ಟ್ ಇದರ ಅಧ್ಯಕ್ಷ ಸೂರಜ್ ಕುಮಾರ್ ಸ್ವಾಗತಿಸಿ ಶೋಭಾ ಶೆಟ್ಟಿ ವಂದಿಸಿದರು ಅಜಯ್ ರಾಜ್ ಕಾರ್ಯಕ್ರಮ ನಿರೂಪಿಸಿದರು.









