ಮೂಡುಬಿದಿರೆ: ಬೆಳುವಾಯಿ ವಿಶ್ವಕರ್ಮ ಸಮಾಜ ಸೇವಾ ಸಂಘದ ಮಾಜಿ ಅಧ್ಯಕ್ಷ ಸುಧಾಕರ ಅಚಾರ್ಯ (66) ಶುಕ್ರವಾರ ಹೃದಯಾಘಾತದಿಂದ ನಿಧನರಾದರು.
ಅವರಿಗೆ ಪತ್ನಿ ಪುತ್ರ, ಪುತ್ರಿ ಇದ್ದಾರೆ. ನವಭಾರತ ಪತ್ರಿಕೆಯಲ್ಲಿ ಪ್ರೂಫ್ ಲೀಡರ್ ಆಗಿದ್ದ ಅವರು ಬಳಿಕ ಉದಯವಾಣಿ ಪತ್ರಿಕೆಯ ಜಾಹೀರಾತು ಸಹಿತ ವಿವಿಧ ವಿಭಾಗಗಳಲ್ಲಿ ಸುಮಾರು 35 ವರ್ಷಗಳಿಗೂ ಅಧಿಕ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.

ವಿಶ್ವಕರ್ಮ ಒಕ್ಕೂಟದ ಕಾರ್ಯಕಾರಣಿ ಸದಸ್ಯರಾಗಿ, ಬೆಳುವಾಯಿ ಹೋಮಲ್ಕೆ ಮಹಮ್ಮಾಯಿ ಕ್ಷೇತ್ರದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಅವರ ನಿಧನಕ್ಕೆ ಶಾಸಕ ಕೆ. ಅಭಯಚಂದ್ರ ಜೈನ್ ಸಂತಾಪ ವ್ಯಕ್ತ ಪಡಿಸಿದ್ದಾರೆ. ಮೂಡುಬಿದಿರೆ ಗುರುಮಠ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಸುಂದರ ಜಿ. ಆಚಾರ್ಯ, ಬೆಳುವಾಯಿ ಗ್ರಾಮ ಪಂಚಾಯತ್ ಅಧ್ಯಕ್ಷ ಭಾಸ್ಕರ ಆಚಾರ್ಯ, ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಭಾಸ್ಕರ್ ಎಸ್ ಕೋಟ್ಯಾನ್ ಸಹಿತ ಅನೇಕ ಗಣ್ಯರು ಮೃತರ ಅಂತಿಮ ದರ್ಶನ ಪಡೆದು ಶೃದ್ಧಾಂಜಲಿ ಸಲ್ಲಿಸಿದರು.
