ಮೂಡುಬಿದಿರೆ: ಕಲ್ಲಬೆಟ್ಟುವಿನಲ್ಲಿರುವ ಎಕ್ಸಲೆಂಟ್ ಕಾಲೇಜು ಹಾಗೂ ಮೂಡುಬಿದಿರೆ ಪ್ರೆಸ್ ಕ್ಲಬ್ ಜಂಟಿ ಆಶ್ರಯದಲ್ಲಿ, ಜೇಸಿಐ ಮೂಡುಬಿದಿರೆ ತ್ರಿಭವನ್ ಸಹಯೋಗದೊಂದಿಗೆ `ಮಾಧ್ಯಮ ಸಂವಾದ’ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಎಕ್ಸಲೆಂಟ್ ಸಂಸ್ಥೆಯ ಕಾರ್ಯದರ್ಶಿ, ಜೇಸಿಐ ಅಧ್ಯಕ್ಷೆ ರಶ್ಮಿತಾ ಯುವರಾಜ್ ಜೈನ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮಲ್ಲಿ, ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು, ಸಮಾಜದ ಬೆಳವಣಿಯಲ್ಲಿ ಮಾಧ್ಯಮದ ಪಾತ್ರ, ಮಾಧ್ಯಮದಲ್ಲಾಗುತ್ತಿರುವ ಏರುಪೇರು, ಮಾಧ್ಯಮದಲ್ಲಿರುವ ಅವಕಾಶ ಸಹಿತ ವಿವಿಧ ವಿಚಾರಗಳಿಗೆ ಸಂಬಂಧಪಟ್ಟಂತೆ ಪ್ರಶ್ನೆಗಳು ಕೇಳಿದರು.


ಸಂವಾದ ಕಾರ್ಯಕ್ರಮದಲ್ಲಿ ಮೂಡುಬಿದಿರೆ ಪ್ರೆಸ್‍ಕ್ಲಬ್ ಅಧ್ಯಕ್ಷ ಧನಂಜಯ್ ಮೂಡುಬಿದಿರೆ, ಉಪಾಧ್ಯಕ್ಷ ಜೈಸನ್ ತಾಕೋಡೆ, ಕಾರ್ಯದರ್ಶಿ ಯಶೋಧರ ವಿ.ಬಂಗೇರ, ಕೋಶಾಧಿಕಾರಿ ಪ್ರೇಮಶ್ರೀ ಕಲ್ಲಬೆಟ್ಟು, ಪ್ರೆಸ್‍ಕ್ಲಬ್ ಸದಸ್ಯರಾದ ಪ್ರಸನ್ನ ಹೆಗ್ಡೆ, ಬೆಳುವಾಯಿ ಸೀತಾರಾಮ ಆಚಾರ್ಯ, ಎಂ.ಗಣೇಶ್ ಕಾಮತ್, ನವೀನ್ ಸಾಲ್ಯಾನ್, ಪದ್ಮಶ್ರೀ ಭಟ್ ನಿಡ್ಡೋಡಿ, ಪತ್ರಕರ್ತೆ ಲವೀನಾ ಭಾಗವಹಿಸಿದರು.
ಕಾಲೇಜಿನ ಪ್ರಾಂಶುಪಾಲ ಸುರೇಶ್ ಬಾಬು ನಾಯರ್, ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರಶಾಂತ್ ಶೆಟ್ಟಿ ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು. ಶರಣ್ಯ ರಾವ್ ಸ್ವಾಗತಿಸಿದರು. ನೀಹಾರಿಕಾ ವಂದಿಸಿದರು. ವಿದ್ಯಾರ್ಥಿ ವಿಘ್ನೇಶ್ ಕಾಮತ್ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *