ಕೈಕಂಬ:ಪ್ರಜ್ಞಾ ಸಲಹಾ ಕೇಂದ್ರ ಕಂಕನಾಡಿ ಮಂಗಳೂರು ಇದರ ಈಆರ್‍ಡಬ್ಲ್ಯೂಸಿ ಯೋಜನೆಯ ಪ್ರೇರಣಾ ಮಹಿಳಾ ಸ್ವಸಹಾಯ ಸಂಘಗಳ ಒಕ್ಕೂಟದ ಕೈಕಂಬ ವಲಯದ, ವಲಯ ಒಕ್ಕೂಟ ಸಭೆಯು ಗುರುಪುರ ಗ್ರಾ.ಪಂ.ಸಭಾಂಗಣದಲ್ಲಿ ಜರುಗಿತು.
ಕಾರ್ಯಕ್ರಮದಲ್ಲಿ ಯೋಜನಾ ಸಂಯೋಜಕರಾದ ವಿಲಿಯಂ ಸ್ಯಾಮುವೆಲ್ ಯೋಜನೆಯ ಸವಲತ್ತುಗಳ ಬಗ್ಗೆ ತಿಳಿಸಿದರು. ವಲಯ ಒಕ್ಕೂಟದ ಅಧ್ಯಕ್ಷರಾದ ಶೋಭಾ ವರದಿ ವಾಚಿಸಿದರು. ಸಂಘದ ಸದಸ್ಯರಾದ ಲಕ್ಷ್ಮೀಬಾಯಿ ವಿವಿಧ ಬಗೆಯ ತಿಂಡಿ ತಿನಿಸುಗಳನ್ನು ಮಾಡುವ ಬಗ್ಗೆ ತರಬೇತಿಯನ್ನು ನೀಡಿದರು, ಪ್ರಪುಲ್ಲಾ ಸ್ವಾಗತಿಸಿ , ಝರೀನ್ ಧನ್ಯವಾದವಿತ್ತರು. ಯೋಜನೆಯ ಮೇಲ್ವಿಚಾರಕರಾದ ರೇಷ್ಮ ಜೋಗಿ, ವಲಯ ಸಂಯೋಜಕರಾದ ಈಶ್ವರ ನಾಯ್ಕ್, ಕಾರ್ಯಕರ್ತೆಯರಾದ ಪಾಲಾಕ್ಷಿ ಹಾಗೂ ಸೀತಾಲಕ್ಷ್ಮೀ ಉಪಸ್ಥಿತರಿದ್ದರು.

26vp okkuta sabe

By suddi9

Leave a Reply

Your email address will not be published. Required fields are marked *