ವಿಟ್ಲ: ಮಕ್ಕಳಲ್ಲಿ ಧೈರ್ಯ, ಸಾಹಸ, ಸೇವೆ ಹಾಗೂ ಪರಿಸರ ಜಾಗೃತಿ ಮೂಡಿಸಿದಾಗ ದೇಶದ ಉತ್ತಮ ಪ್ರಜೆಗಳಾಗುತ್ತಾರೆ. ಆಗ ಬಲಿಷ್ಠ ಭಾರತದ ಕನಸು ಸಾಧ್ಯ. ಗುಣಮಟ್ಟದ ಸ್ಕೌಟ್ಸ್ & ಗೈಡ್ಸ್ ಸಂಖ್ಯೆಯನ್ನು ಹೆಚ್ಚಿಸುವಲ್ಲಿ ತಾವೆಲ್ಲ ಕಾರ್ಯ ಪ್ರವೃತ್ತರಾಗಿ ಎಂದು ಭಾರತ್ ಸ್ಕೌಟ್ಸ್‍ನ ಜಿಲ್ಲಾ ಚೀಫ್ ಕಮಿಷನರ್ ಎನ್.ಜಿ.ಮೋಹನ್ ಕರೆ ನೀಡಿದರು. ವಿಟ್ಲ ಭಾರತ್ ಸ್ಕೌಟ್ಸ್& ಗೈಡ್ಸ್ ಸ್ಥಳೀಯ ಸಂಸ್ಥೆ ಇದರ ಮಹಾಸಭೆಯು ವಿಟ್ಲದ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಭಾಭವನದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಸ್ಥಳೀಯ ಸಂಸ್ಥೆ ಅಧ್ಯಕ್ಷರಾದ ಪ್ರಭಾಕರ ಶೆಟ್ಟಿ ದಂಬೆಕಾನ ವಹಿಸಿಕೊಂಡಿದ್ದರು.DSC_0543

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್ ಕದ್ರಿ, ಕೋಶಾಧಿಕಾರಿ ವಾಸುದೇವ ಬೋಳೂರು, ಸ್ಕೌಟ್ಸ್ ಕಮಿಷನರ್ ರಾಮಶೇಷ ಶೆಟ್ಟಿ, ದೈಹಿಕ ಶಿಕ್ಷಣ ಪರಿವೀಕ್ಷಕರಾದ ಗುರುನಾಥ್ ಬಾಗೇವಾಡಿ, ಸ್ಥಳೀಯ ಸಂಸ್ಥೆ ಉಪಾಧ್ಯಕ್ಷರಾದ ಹಾಗೂ ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷ ಸುದರ್ಶನ ಪಡಿಯಾರ್, ಗೈಡ್ಸ್ ಜೂಲಿಯಾನ ಮೇರಿ ಲೋಬೋ, ವಿಟ್ಲ ಮಾದರಿ ಶಾಲೆಯ ಮುಖ್ಯೋಪಾಧ್ಯಾಯರಾದ ಮೋಹನ್ ರಾಜ್, ಚಂದ್ರಕಲಾ, ಜಿಲ್ಲಾ ಸಂಘಟಕ ಭರತ್, ಕಾರ್ಯದರ್ಶಿ ಬಿ.ವಿಶ್ವನಾಥ ಗೌಡ ಕುಳಾಲು ವೇದಿಕೆಯಲ್ಲಿ ಉಪಸ್ಥಿತರಿದ್ದರು. ನರಸಿಂಹ ಭಟ್ ಪೆರುವಾಯಿ ವರದಿ ವಾಚಿಸಿದರು. ಜೆಸಿಂತ ಮಸ್ಕರೇಂಞಸ್ ಧನ್ಯವಾದವಿತ್ತರು. ಸಹಕಾರ್ಯದರ್ಶಿ ಇಸ್ಮಾಯಿಲ್ ಕಾರ್ಯಕ್ರಮ ನಿರ್ವಹಿಸಿದರು.

By suddi9

Leave a Reply

Your email address will not be published. Required fields are marked *