ಬಂಟ್ವಾಳ:ತಾಲ್ಲೂಕಿನ ಕೊಳ್ನಾಡು ಗ್ರಾಮದ ಸಾಲೆತ್ತೂರು ಎಂಬಲ್ಲಿ ರಸ್ತೆ ಬದಿ ಸಾರ್ವಜನಿಕರಿಗೆ ಕಿರಿಕಿರಿಯಾಗುವಂತೆ ಬಂಟ್ವಾಳ ಎಪಿಎಂಸಿ ವತಿಯಿಂದ ನಿರ್ಮಿಸಲು ಉದ್ದೇಶಿಸಿದ್ದ ಮಾರುಕಟ್ಟೆ ಸಂಕೀರ್ಣಕ್ಕೆ ಬಂಟ್ವಾಳ ಪ್ರಧಾನ ಸಿವಿಲ್ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.

ಇಲ್ಲಿನ ಸರ್ವರ್ ನಂಬ್ರ 509-2 ರ 1.71 ಎಕ್ರೆ ಸರ್ಕಾರಿ ಜಮೀನಿನಲ್ಲಿ ಬಂಟ್ವಾಳ ಎಪಿಎಂಸಿ ವತಿಯಿಂದ ಮಾರುಕಟ್ಟೆ ಸಂಕೀರ್ಣ ನಿಮರ್ಿಸಲು ಜಮೀನು ಸಮತಟ್ಟು ಕಾಮಗಾರಿ ಕೈಗೆತ್ತಿಕೊಂಡಿತ್ತು.
ಈ ಜಮೀನಿನ ಪಕ್ಕದಲ್ಲೇ ಮೆಸ್ಕಾಂ ವಿದ್ಯುತ್ ವಿತರಣಾ ಉಪಕೇಂದ್ರವೂ ಇದೆ. ಈ ಸಬ್ಸ್ಟೇಶನ್ಗೆ 110 ಕೆವಿ ವಿದ್ಯುತ್ ಲೈನ್ ಹಾದು ಬರುತ್ತಿದೆ. ಇದಕ್ಕೆ ಸಂಬಂಧಪಟ್ಟ ಕಂಬ ಹಾಗೂ ಟವರ್ತನಕವೂ ಗುಡ್ಡವನ್ನು ಅಗೆದು ಜಮೀನು ಸಮತಟ್ಟುಗೊಳಿಸಲಾಗಿದೆ. ಮಾತ್ರವಲ್ಲದೆ ಸ್ಥಳೀಯ ಗ್ರಾಮ ಪಂಚಾಯಿತಿ ವತಿಯಿಂದ ಅಳವಡಿಸಿರುವ ಕುಡಿಯುವ ನೀರಿನ ಟ್ಯಾಂಕ್ ಕುಸಿತದ ಭೀತಿ ಎದುರಿಸುತ್ತಿದೆ ಎಂದು ನಾಗರಿಕರು ಆರೋಪಿಸಿದ್ದರು.
ಈ ಬಗ್ಗೆ ಕುಳಾಲು ನಿವಾಸಿ ರಾಮಣ್ಣ ರೈ ಬಂಟ್ವಾಳ ಸಿವಿಲ್ ಪ್ರಧಾನ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ಹೂಡಿದ್ದರು. ಸದ್ರಿ ರಾಮಣ್ಣ ರೈ ಅವರ ಸಾರ್ವಜನಿಕ ಹಿತಾಸಕ್ತಿ ದಾವೆ ಬಗ್ಗೆ ಪರಿಶೀಲನೆ ನಡೆಸಿದ ನ್ಯಾಯಾಲಯವು ಇಲ್ಲಿನ ಮಾರುಕಟ್ಟೆ ಸಂಕೀರ್ಣ ನಿಮರ್ಾಣಕ್ಕೆ ತಡೆಯಾಜ್ಞೆ ನೀಡಿದೆ ಎಂದು ತಿಳಿಸಿದ್ದಾರೆ.
