ಮೂಡುಬಿದಿರೆ: ಸಾರ್ವಜನಿಕರು ಹಾಗೂ ವಿವಿಧ ಸಂಘ, ಸಂಸ್ಥೆಗಳ ಸಹಯೋಗದಲ್ಲಿ ಕಲ್ಲಮುಂಡ್ಕೂರಿನ ಮಾಣಿಲ ಗದ್ದೆಯ ಪೂಪಿಂಗಾರ ಚಾವಡಿಯಲ್ಲಿ ಭಾನುವಾರ `ಕೆಸರ್‍ದ ಕಂಡೊಂಡು ಆಟಿಡ್ ಒಂಜಿ ದಿನ’ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ಕಲ್ಲಮುಂಡ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ವರದರಾಯ ಆರ್. ಕಾಮತ್ ಹಿಂಗಾರ ಅರಳಿಸುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ,ಕೃಷಿ ಪರಂಪರೆಯನ್ನು ಪರಿಚಯಿಸುವ ಕೆಲಸ ಪ್ರತಿ ಊರನಲ್ಲಿ ಆಗಬೇಕು ಎಂದರು.

mbd_july17_1 (2)

mbd_july17_1 (3)

mbd_july17_1 (4)

mbd_july17_1 (5)
ದೈಲಬೆಟ್ಟು ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಮಂಜುನಾಥ ಭಟ್ ಕೃಷಿ ಪರಂಪರೆಯ ಕುರಿತು ಮಾತನಾಡಿದರು.
ಉದ್ಯಮಿ ಎಂ.ಬಿ ಕರ್ಕೇರಾ ಅಧ್ಯಕ್ಷತೆ ವಹಿಸಿದರು. ಕಲ್ಲಮುಂಡ್ಕೂರು ಗ್ರಾಮ ಪಂಚಾಯತಿ ಅಧ್ಯಕ್ಷ ಪ್ರೇಮಾ ನಾಯ್ಕ್ ನಿಡ್ಡೋಡಿ ಚರ್ಚ್‍ನ ಧರ್ಮಗುರು ಗ್ರೆಗೋರಿ ಸೆರಾವೊ, ಪಿಡಬ್ಯುಡಿ ಗುತ್ತಿಗೆದಾರ ಸಂತೋಷ್ ಶೆಟ್ಟಿ , ಶ್ರೀಧರ ಶೆಟ್ಟಿ ಮಾಣಿಲ, ಉದ್ಯಮಿ ಜಯರಾಮ ಶೆಟ್ಟಿ, ಡಾ.ಮುರಳೀಧರ್,ಕರುಣಾಕರ ಶೆಟ್ಟಿ, ದೇವದಾಸ್ ಶೆಟ್ಟಿ, ಪುರಸಭಾ ಸದಸ್ಯ ರತ್ನಾಕರ ದೇವಾಡಿಗ, ತುಳು ಲೇಖಕ ಉಗ್ಗಪ್ಪ ಪೂಜಾರಿ, ಸಂಘಟಕರಾದ ಜೋಕಿಂ ಕೊರೆಯ, ಗಂಗಾಧರ ಶೆಟ್ಟಿ, ಸುಖಾನಂದ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಅಂತರಾಷ್ಟ್ರೀಯ ಕ್ರೀಡಾಪಟುಗಳಾದ ವಿಜಯ ಕಾಂಚನ್ ಬೈಕಂಪಾಡಿ ಮತ್ತು ಅಕ್ಷತಾ ಪೂಜಾರಿ ಬೋಳ ಇವರನ್ನು ಸನ್ಮಾನಿಸಲಾಯಿತು.
ಓಸ್ವಾಲ್ಡ್ ಡಿಸೋಜಾ ಸ್ವಾಗತಿಸಿದರು. ಗುರು ಎಂ.ಪಿ ನಿರೂಪಿಸಿದರು. ಎರಡು ಜತೆ ಕಂಬಳದ ಕೋಣಗಳನ್ನು ಗದ್ದೆಯಲ್ಲಿ ಓಡಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾಣಿಲ ಬಾಕಿಮಾರು ಗದ್ದೆಯಲ್ಲಿ ಊರವರು ವಿವಿಧ ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.

By suddi9

Leave a Reply

Your email address will not be published. Required fields are marked *