ಬಂಟ್ವಾಳ: ಮಾಣಿಬೆಟ್ಟು ಶ್ರೀ ದುಗರ್ಾಂಬಿಕಾ ಸೇವಾ ಸಮಿತಿ ಹಾಗೂ ಜೀಣರ್ೋದ್ಧಾರ ಸಮಿತಿ ಆಶ್ರಯದಲ್ಲಿ ಬಿ.ಸಿ.ರೋಡು ಯಕ್ಷಲೋಕ ವ್ಯಕ್ತಿವಿಕಾಸ ಶಿಕ್ಷಣ ಪ್ರತಿಷ್ಠಾನದ ಸಹಯೋಗದೊಂದಿಗೆ ಪೋಷಕರಿಗೆ ಶಿಕ್ಷಣ ಮಾರ್ಗದರ್ಶನ ಹಾಗೂ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮ ಶನಿವಾರ ಮಾಣಿಬೆಟ್ಟು ಶ್ರೀ ದುಗರ್ಾಂಬಿಕಾ ಕ್ಷೇತ್ರದಲ್ಲಿ ನಡೆಯಿತು.
ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕು ಅಧ್ಯಕ್ಷ ಸುದರ್ಶನ್ ಜೈನ್ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಸ್ತುತ ಮಕ್ಕಳಿಗೆ ವಿದ್ಯಾಬ್ಯಾಸದ ಅನುಕೂಲಕ್ಕಾಗಿ ಸರಕಾರ ಮತ್ತು ವಿವಿಧ ಸಾಮಾಜಿಕ ಸಂಘಟನೆಗಳು ವಿವಿಧ ಸೌಲಭ್ಯಗಳನ್ನು ಒದಗಿಸುತ್ತಿದ್ದು ಮಕ್ಕಳು ಇದರ ಸದುಪಯೋಗ ಪಡೆದು ಶೈಕ್ಷಣಿಕ ಪ್ರಗತಿ ಸಾಧಿಸುವುದರೊಂದಿಗೆ ಸಮಾಜದ ಸತ್ಪ್ರಜೆಯಾಗಿ ರೂಪುಗೊಳ್ಳಬೇಕು. ಪೋಷಕರು ತಮ್ಮ ಮಕ್ಕಳಿಗೆ ಕಾಲಕಾಲಕ್ಕೆ ಸೂಕ್ತ ಮಾರ್ಗದರ್ಶನ ನೀಡುವ ಮೂಲಕ ಮಕ್ಕಳು ಸರಿಯಾದ ದಾರಿಯಲ್ಲಿ ಮುನ್ನಡೆಯಲು ಪ್ರೇರಣೆಯಾಗಬೇಕು ಎಂದ ಅವರು ಮಾಣಿಬೆಟ್ಟು ಕ್ಷೇತ್ರ ಧಾಮರ್ಿಕ ಸತ್ಕಾರ್ಯಗಳ ಜತೆಯಲ್ಲಿ ಶೈಕ್ಷಣಿಕ ಕ್ಷೇತ್ರದ ಬೆಳವಣಿಗೆಗೆ ಪೂರಕವಾದ ಇಂತಹ ಕಾರ್ಯಕ್ರಮ ಆಯೋಜಿಸುತ್ತಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ ಎಂದು ಹೇಳಿದರು.
ಪಿಲಿಮೊಗರು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಶಾರದಾ ಅಧ್ಯಕ್ಷತೆ ವಹಿಸಿದ್ದರು. ಧಾಮರ್ಿಕ ಕ್ಷೇತ್ರವೊಂದು ಈ ರೀತಿ ಶಾಲಾ ಮಕ್ಕಳನ್ನು ಹಾಗೂ ಪೋಷಕರನ್ನು ಕ್ಷೇತ್ರಕ್ಕೆ ಬರಮಾಡಿಸಿ ಶೈಕ್ಷಣಿಕ ಮಾರ್ಗದರ್ಶನ ಹಾಗೂ ಪ್ರೋತ್ಸಾಹ ನೀಡಿರುವುದರಿಂದ ಮಕ್ಕಳಲ್ಲೂ ಧಾಮರ್ಿಕ ಪ್ರಜ್ನೆ ಬೆಳೆಯಲು ಕಾರಣವಾಗುತ್ತದೆ. ಶೈಕ್ಷಣಿಕವಾದ ದಾನ ಶ್ರೇಷ್ಠವಾದುದು. ಈ ಮೂಲಕ ಸಮಾಜದ ಎಲ್ಲಾ ಮಕ್ಕಳು ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಶ್ರೀ ಕ್ಷೇತ್ರ ದೇವಿ ಆರಾಧಕ ಹರೀಶ ನಾಯ್ಕ ಅವರು ಪಿಲಿಮೊಗರು ಶಾಲೆಯ ಒಂದರಿಂದ ಏಳನೇ ತರಗತಿಯ ಎಲ್ಲಾ ಮಕ್ಕಳಿಗೂ ಉಚಿತವಾಗಿ ಬರೆಯುವ ಪುಸ್ತಕಗಳನ್ನು ನೀಡಿ ಆಶ್ರೀರ್ವದಿಸಿದರು.
ಯಕ್ಷಲೋಕ ನಿದರ್ೇಶಕ ಗೋಪಾಲ ಅಂಚನ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ” ಮಕ್ಕಳ ಶಿಕ್ಷಣದಲ್ಲಿ ಪೋಷಕರ ಪಾತ್ರ” ವಿಷಯದಲ್ಲಿ ಮಾತನಾಡಿದರು.
ಗ್ರಾಮ ಪಂಚಾಯತು ಸದಸ್ಯ ದಿನೇಶ್ ಶೆಟ್ಟಿ, ಹಿರಿಯರಾದ ಅಣ್ಣಿ ಶೆಟ್ಟಿ, ಡೊಂಬಯ್ಯ ಪೂಜಾರಿ, ವಾಮನ ನಾಯ್ಕ್ ಉಪಸ್ಥಿತರಿದ್ದರು.
ಉಪನ್ಯಾಸಕ, ಸಮಿತಿಯ ಕಾರ್ಯದಶರ್ಿ ಬಾಲಕೃಷ್ಣ ನಾಯ್ಕ ಬೆಳ್ಳಾರೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸೇವಾ ಸಮಿತಿ ಅಧ್ಯಕ್ಷ ಮಂಜಪ್ಪ ನಾಯ್ಕ ಸ್ವಾಗತಿಸಿದರು. ತುಷಾರ ಮಾಣಿಬೆಟ್ಟು ವಂದಿಸಿದರು.

By suddi9

Leave a Reply

Your email address will not be published. Required fields are marked *