ಸುಳ್ಯ : ಕುಲಾಲ ಸುಧಾರಕ ಸೇವಾ ಸಂಘ ಸುಳ್ಯ-ಬೆಳ್ಳಾರೆ ವತಿಯಿಂದ ಪಂಜಿಗಾರಿನ ಉಮೇಶ್‌ರವರ ಗದ್ದೆಯಲ್ಲಿ ಕೆಸರುಗದ್ದೆ ಕ್ರೀಡಾಕೂಟವು ಇತ್ತೀಚೆಗೆ ನಡೆಯಿತು. ಗ್ರಾಮದ ಹಿರಿಯರಾದ ಸೀತಮ್ಮ ಪಂಜಿಗಾರು ಅವರು ಕ್ರೀಡಾಕೂಟವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
bellare1
bellare2
bellare3
bellare5
bellare6
ಕೂಟದ ವೇದಿಕೆಯಲ್ಲಿ ಸಂಘದ ನಿಕಟಪೂರ್ವ ಅಧ್ಯಕ್ಷ ರಾಮಣ್ಣ ಮೂಲ್ಯ, ಕಾರ್ಯದರ್ಶಿ ಮೀನಾಕ್ಷಿ ಮೂಲ್ಯ, ಸಂಘದ ಅಧ್ಯಕ್ಷ ರಾಧಾಕೃಷ್ಣ ಕುಲಾಲ್, ಕ್ರೀಡಾಕೂಟದ ತೀರ್ಪುಗಾರ ವಿಶ್ವನಾಥ್ ಮುಂತಾದವರು ಉಪಸ್ಥಿತರಿದ್ದರು. ಮಧು ಕುಮಾರ್ ಪಣಿಮಜಲು ಪ್ರಾರ್ಥನೆಯೊಂದಿಗೆ ಆರಂಭವಾದ ಸಮಾರಂಭವನ್ನು ನಾಗೇಶ್ ಕುಲಾಲ್ ನಿರೂಪಿಸಿದರೆ, ರಾಧಾಕೃಷ್ಣ ಕುಲಾಲ್ ಸ್ವಾಗತಿಸಿ, ವಂದನಾರ್ಪಣೆಗೈದರು.

By suddi9

Leave a Reply

Your email address will not be published. Required fields are marked *