ಬೆಳಗಾವಿ: ಭಾರತ್ ಕೋ.ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ತನ್ನ 96ನೇ ಶಾಖೆಯನ್ನು  ಮಂಗಳವಾರ ಕರ್ನಾಟಕ ರಾಜ್ಯದ ಬೆಳಗಾವಿ ಜಿಲ್ಲೆಯ ಕೇಂದ್ರ ಪ್ರದೇಶ ಖಾನಪುರ್ ರಸ್ತೆಯಲ್ಲಿನ ಗೋವಿಯಸ್ ಸರ್ಕಲ್ ಸನಿಹದ ಅಮರ್ ಎಂಪಾಯರ್ ಕಟ್ಟಡದಲ್ಲಿ  ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಅಧ್ಯಕ್ಷ ಹಾಗೂ ಭಾರತ್ ಬ್ಯಾಂಕ್ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ ರಿಬ್ಬನ್ ಕತ್ತರಿಸಿ ಭಾರತ್ ಬ್ಯಾಂಕ್‍ನ ನೂತನ ಶಾಖೆಯನ್ನು ಉದ್ಘಾಟಿಸಿದರು. ಬೆಳಗಾವಿ ಬಿಲ್ಲವರ ಅಸೋಸಿಯೇಶನ್‍ನ ಅಧ್ಯಕ್ಷ ಕೃಷ್ಣ ಪೂಜಾರಿ ಅವರು ಜ್ಯೋತಿ ಪ್ರಜ್ವಲಿಸಿ ಶಾಖೆಗೆ ವಿಧ್ಯುಕ್ತವಾಗಿ ಚಾಲನೆ ನೀಡಿದರು.

Bharat Bank Ltd.Belagavi -AA2

Bharat Bank (95) Palghar-1

Bharat Bank (95) Palghar-4

Bharat Bank (95) Palghar-8

Bharat Bank (95) Palghar-13

Bharat Bank (95) Palghar-17

Bharat Bank (96) Belagavi-1

Bharat Bank (96) Belagavi-2

Bharat Bank (96) Belagavi-3

Bharat Bank (96) Belagavi-9

Bharat Bank (96) Belagavi-12

Bharat Bank (96) Belagavi-13

Bharat Bank (96) Belagavi-14

Bharat Bank (96) Belagavi-15

Bharat Bank (96) Belagavi-16

Bharat Bank (96) Belagavi-17

Bharat Bank (96) Belagavi-18

Bharat Bank (96) Belagavi-19

Bharat Bank (96) Belagavi-21

Bharat Bank (96) Belagavi-23

Bharat Bank (96) Belagavi-24

Bharat Bank (96) Belagavi-25

Bharat Bank (96) Belagavi-27

Bharat Bank (96) Belagavi-28

Bharat Bank (96) Belagavi-29

Bharat Bank (96) Belagavi-C1

Bharat Bank Ltd.Belagavi -AA1

Bharat Bank Ltd.Belagavi -AA2

ಬ್ಯಾಂಕ್‍ನ ನಿರ್ದೇಶಕ ಜ್ಯೋತಿ ಕೆ.ಸುವರ್ಣ ಅವರು ಎಟಿಎಂ ಮತ್ತು ನಿರ್ದೇಶಕ ಚಂದ್ರಶೇಖರ ಎಸ್.ಪೂಜಾರಿ ಸೇಫ್ ಲಾಕರ್‍ನ್ನೂ, ಹಾಗೂ ಬ್ಯಾಂಕ್‍ನ ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ.ಆರ್ ಮೂಲ್ಕಿ ಕಂಪ್ಯೂಟರೀಕೃತ ಸೇವೆಗೆ ಚಾಲನೆ ನೀಡಿ  ಶುಭಾರೈಸಿದರು.

ಬೆಳಗಾವಿ ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ಕೆ.ರತ್ನಾಕರ ಶೆಟ್ಟಿ ಮಾತನಾಡಿ ಶುಭಾರೈಸಿ ಸಹಕಾರಿ ಕ್ಷೇತ್ರದಲ್ಲಿ ಭಾರತ್ ಬ್ಯಾಂಕ್‍ನ ಅದ್ಭುತವಾದ ಸಾಧನೆ ಅಭಿನಂದನೀಯ. ಗಣನೀಯ ಪ್ರಮಾಣದಲ್ಲಿ ಸರ್ವಾಂಗೀಣ ಪ್ರಗತಿ ಹೊಂದಿದ ಹೆಗ್ಗಳಿಕೆ ಈ ಬ್ಯಾಂಕ್‍ಗಿದೆ. ಜಯ ಸುವರ್ಣರು ಬ್ಯಾಂಕ್‍ನ ರೂವಾರಿಯಾಗಿದ್ದು ಅವರ ತಂಡದ ಹಣಕಾಸು ಸೇವೆ ಗಣನೀಯ ರೀತಿಯ ಪ್ರಗತಿ ಕಂಡಿದೆ. ನಾಡಿಗೆ ಭಾರತ್ ಬ್ಯಾಂಕ್‍ನ ಆಗಮನ ಆನಂದದಾಯಕವಾಗಿದೆ. ಬೆಳಗಾವಿಯ ಸಮಸ್ತ ಜನತೆಯ ಪರವಾಗಿ  ಶುಭ  ಹಾರೈಸುತ್ತೇವೆ.  ಬ್ಯಾಂಕ್‍ನ ಸೇವೆ ಕಟ್ಟುನಿಟ್ಟಾಗಿದ್ದಾರೆ ಜನತೆ ಒಟ್ಟಾಗಿ ಸ್ಪಂದಿಸುತ್ತಾರೆ. ವಿಶ್ವಾಸನೀಯ ಸೇವೆ ಮತ್ತು ವ್ಯವಹಾರನಿಷ್ಠೆಯಿಂದ ಶ್ರೇಯೋನ್ನತಿ ಸಾಧ್ಯ. ಹಣಕಾಸು ವ್ಯವಹಾರ ಉದ್ಯಮ ಹಾಗೂ ಆರ್‍ಬಿಐ ನಿಯಾಮಾನುಸಾರ ಮುನ್ನಡೆದಾಗ ಸಾರ್ಥಕ ವ್ಯವಾಹಾರ ತಾನಾಗಿಯೇ ಒಳಿಯುವುದು. ಇಂತಹ ಸೇವೆಯಿಂದ ಪ್ರತಿಷ್ಠೆ ಗಳಿಕೆ ಸಾಧ್ಯವಾಗುವುದು ಎಂದರು.

ಬೆಳಗಾವಿ ಹೋಟೇಲ್ ಮಾಲಕ  ಅಸೋಸಿಯೇಶನ್‍ನ ಅಧ್ಯಕ್ಷ ವಿಜಯ ಬಿ.ಸಾಲ್ಯಾನ್ ಇರುವೈಲು ಮಾತನಾಡಿ ರಾಷ್ಟ್ರೀಕೃತ ಬ್ಯಾಂಕುಗಳಿಗೂ ಮಿಕ್ಕಿದ ಸೇವೆ ಭಾರತ್ ಬ್ಯಾಂಕ್‍ನ ವೈಖರಿಯಾಗಿದೆ. ನಾರಾಯಣ ಗುರುಗಳ ತತ್ವದಂತೆ ಮುನ್ನಡೆಯುವ ಬ್ಯಾಂಕಿಂಗ್ ವ್ಯವಹಾರದ ಅರಿವು ಮೂಡಿಸುತ್ತಾ ಹಣಕಾಸು ಪ್ರೇರಣೆಗೆ  ಪ್ರೋತ್ಸಾಹದಾಯಕವಾಗಿದೆ. ಗ್ರಾಹಕರನ್ನು ಆರ್ಥಿಕವಾಗಿ ಬಲ ಪಡಿಸಿದ ಬ್ಯಾಂಕ್ ಇದಾಗಿದೆ. ಭಾರತ್ ಬ್ಯಾಂಕ್ ಬೆಳಗಾವಿಯಲ್ಲೂ ಉನ್ನತಿಯನ್ನೇ ಸಾಧಿಸಲಿ ಎಂದು ಶುಭಕೋರಿದರು.

ಗ್ರಾಹಕರ ಬಲಶೀಲತೆಯ ಬ್ಯಾಂಕ್ ಎಂದೆಣಿಸಿದ ಈ ಬ್ಯಾಂಕ್ ಸಮಾಜದ ಸಮಗ್ರ ಜನತೆಗೆ ಒಳಿತನ್ನೇ ಪ್ರಾಪ್ತಿಸಲಿ. ಇದರ ಪ್ರತಿಫಲವು ಸಮಾಜಕ್ಕೂ ಬ್ಯಾಂಕ್‍ಗೂ ಫಲಿಸಲಿ ಎಂದು ಹಿರಿಯ ಹೊಟೇಲು ಉದ್ಯಮಿ ವಿಠಲ್ ಹೆಗ್ಡೆ ಆಶಿಸಿದರು.

ಉದ್ಯಮಿ ನಾರಾಯಣ ನಾಯ್ಕ್ ಮಾತನಾಡಿ ಈ ಶಾಖೆ ಇಲ್ಲಿನ ಕರಾವಳಿ ಜನತೆಗೆ ಅನುಕೂಲಕರವಾಗಲಿ. ಮಧ್ಯಮ ವರ್ಗದ ಜನತೆಯ ಆಶಾಕಿರವಾಗಿಯೇ ಹೆಸರಾಂತ ಈ ಬ್ಯಾಂಕ್ ಸ್ಥಾನೀಕರ ಆರ್ಥಿಕ  ಪ್ರಗತಿಗೆ ಪೂರಕವಾಗಲಿ. ಕರ್ನಾಟಕ ರಾಜ್ಯದ ಎರಡನೇ ರಾಜಧಾನಿ ಎಂದೆಣಿಸಿದ ಬೆಳಗಾವಿಯಾದಾದ್ಯಂತ ಇನ್ನೂ ನಾಲ್ಕೈದು ಶಾಖೆಗಳನ್ನು ತೆರೆಯುವಂತಾಗಲಿ ಎಂದು ಆಶಯ ವ್ಯಕ್ತ ಪಡಿಸಿದರು.

ಸಾಂಗ್ಲಿ ಯಿಂದ  ಬೆಳಗಾವಿಗೆ ಬಂದು  ಈ ಬ್ಯಾಂಕ್ ತನ್ನ ಶಾಖೆಯನ್ನು ಶೀಘ್ರವೇ ಸಾಂಗ್ಳಿಯನ್ನೂ ವಿಸ್ತಾರಿಸಲಿ. ನಾಡಿನ ಸಮಗ್ರ ಜನತೆಯ ಪ್ರೀತಿವಿಶ್ವಾಸಕ್ಕೆ ಪಾತ್ರವಾಗಿ ಸರ್ವರ ಬದುಕು ಬೆಳಗಿಸಲಿ ಎಂದು ನಾರಾಯಣ ಪೂಜಾರಿ ಸಾಂಗ್ಳಿ ತಿಳಿಸಿದರು.
ಮೋಹನ್ ಸಿ.ಪೂಜಾರಿ ಅಹ್ಮದಾಬಾದ್, ಕಟ್ಟಡದ ಮಾಲೀಕ ಅಮರ್ ಅಕ್ನೋಜಿ, ಸುಜನ್ ಕುಮಾರ್, ರಮಾನಂದ ಸೇರಿಗಾರ್, ರಾಮಮೋಹನ್ ನಾಯ್ಕ್ ಸಂದರ್ಭೋಚಿತವಾಗಿ ಮಾತನಾಡಿ ಶುಭಕೋರಿದರು.

ಈ ಶುಭಾವಸರದಲ್ಲಿ ಅತಿಥಿಗಳಾಗಿ ಬೆಳಗಾವಿ ಬಿಲ್ಲವರ ಅಸೋಸಿಯೇಶನ್‍ನ ಸಂಸ್ಥಾಪಕಾಧ್ಯಕ್ಷ ಕರಿಯಣ್ಣ ಪೂಜಾರಿ, ಸುನೀಲ್ ಆರ್.ಪೂಜಾರಿ ಹೆಜ್ಮಾಡಿ, ಶ್ರವನ್‍ಕುಮಾರ್ ಆರ್.ಹೆಗ್ಡೆ, ಎಲ್ಲಪ್ಪ ಅಕ್ನೋಜಿ, ಎ.ಜಿ ಎಲೂಳ್ಕರ್ ಬೆಳಗಾವಿ, ಎನ್.ಕೆ ಪೂಜಾರಿ, ಸುಜನ್ ಕುಮಾರ್, ಸುಧಾಕರ್ ಪೂಜಾರಿ ಸಾಂಗ್ಳಿ, ಶೇಖರ್ ಪೂಜಾರಿ, ಲೀಲಾವತಿ ಜಯ ಸುವರ್ಣ, ಸುನಂದ ಮೋಹನ್ ಪೂಜಾರಿ, ಶಂಕರ್ ಕೆ.ಸುವರ್ಣ ಖಾರ್, ಜಗನ್ನಾಥ್ ಎಂ.ಅಮೀನ್, ಬ್ಯಾಂಕ್‍ನ ನೂತನ ಗ್ರಾಹಕರು, ಷೇರುದಾರರು, ಹಿತೈಷಿಗಳು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಜಯ ಸುವರ್ಣ ಅವರು ಸುನೀಲ್ ಆರ್.ಪೂಜಾರಿ ಹೆಜ್ಮಾಡಿ ಮತ್ತು ವಿನುತಾ ಸುನೀಲ್ ದಂಪತಿಯನ್ನು ಸನ್ಮಾನಿಸಿದರು. ವಿಜಯ ಬಿ.ಸಾಲ್ಯಾನ್ , ಕೆ.ರತ್ನಾಕರ ಶೆಟ್ಟಿ, ವಿಠಲ್ ಹೆಗ್ಡೆ, ಕರಿಯಣ್ಣ ಪೂಜಾರಿ, ಕೃಷ್ಣ ಪೂಜಾರಿ ಅವರನ್ನು ಫಲಪುಷ್ಪಗಳನ್ನಿತ್ತು ಗೌರವಿಸಿದರು. ಹಾಗೂ ಶಾಖೆಯ ಮುಖ್ಯಸ್ಥ ಕಿರಣ್‍ಕುಮಾರ್ ಬಿ.ಪೂಜಾರಿ ಅವರಿಗೆ ಪುಷ್ಫಗುಪ್ಚವನ್ನೀಡಿ ಶುಭಾರೈಸಿದರು.

ಬ್ಯಾಂಕ್‍ನ ನಿರ್ದೇಶಕರಾದ ಚಂದ್ರಶೇಖರ ಎಸ್.ಪೂಜಾರಿ, ಗಂಗಾಧರ್ ಜೆ.ಪೂಜಾರಿ, ಜ್ಯೋತಿ ಕೆ.ಸುವರ್ಣ, ಮುಖ್ಯ ಪ್ರಧಾನ ವ್ಯವಸ್ಥಾಪಕ ಅನಿಲ್‍ಕುಮಾರ್ ಆರ್.ಅವಿೂನ್, ಮಹಾ ಪ್ರಂಬಧಕರುಗಳಾದ ನಿತ್ಯಾನಂದ ಡಿ.ಕೋಟ್ಯಾನ್, ಮಹಾ ಪ್ರಂಬಧಕಿ ಶೋಭಾ ದಯಾನಂದ್ (ವಿಶ್ರಾಂತ), ಸಹಾಯಕ ಮಹಾ ಪ್ರಬಂಧಕ ಬಾಲಕೃಷ್ಣ ಎಸ್.ಕರ್ಕೇರ, ಮಾಜಿ ನಿರ್ದೇಶಕ ಎನ್.ಎಂ ಸನೀಲ್ ಉಪಸ್ಥಿತರಿದ್ದು, ಶಾಖಾ ಸಹ ಪ್ರಬಂಧಕ ನಾಗೇಶ್ ಟಿ.ಪೂಜಾರಿ, ಸಿಬ್ಬಂದಿಗಳಾದ ಪ್ರಶಾಂತ್ ಕುಮಾರ್, ಅಶ್ವಿನ್ ಅಮೀನ್, ಶಿವರಾಜ್ ಬಂಗೇರ, ದಿವ್ಯಶ್ರೀ ಎಸ್.ಪೂಜಾರಿ, ಕೆ.ಸಂದೀಪ್ ಅವರಿಗೆ ಪುಷ್ಫಗುಪ್ಚ ನೀಡಿ ಅಭಿನಂದಿಸಿದರು.

ಈ ಶುಭಾವಸರದಲ್ಲಿ ವಿವಿಧ ಶಾಖಾ ಮುಖ್ಯಸ್ಥರುಗಳಾದ ಗಣೇಶ್ ಎನ್.ಅವಿೂನ್ (ಹುಬ್ಬಳ್ಳಿ), ಬ್ಯಾಂಕ್‍ನ ಅಭಿವೃದ್ಧಿ ಇಲಾಖೆಯ ಸುನೀಲ್ ಗುಜರನ್, ವಿಜಯ ಬಿ.ಪಾಲನ್, ಅವೀಶ್ ಪೂಜಾರಿ ಮತ್ತಿತರರು ಹಾಜರಿದ್ದು, ಪುರೋಹಿತ ಶ್ರೀ ಧನಂಜಯ ಶಾಂತಿ ಉಳ್ಳೂರು ಮತ್ತು ಶ್ರೀ ದಿನೇಶ್ ಶಾಂತಿ ಉಳ್ಳೂರು ತಮ್ಮ ಪೌರೋಹಿತ್ಯದಲ್ಲಿ ವಾಸ್ತುಪೂಜೆ, ವಾಸ್ತು ಬಲಿ, ವಾಸ್ತುಹೋಮ, ಗಣಹೋಮ, ಲಕ್ಷ್ಮೀಸತ್ಯನಾರಾಯಣ ಪೂಜೆ, ದ್ವಾರಪ್ರವೇಶ ಪೂಜೆ ನೆರವೇರಿಸಿ ತೀರ್ಥಪ್ರಸಾದ ವಿತರಿಸಿದರು. ಯಶವಂತ್ ಟಿ.ಅಮೀನ್, ಪ್ರಕಾಶ್ ಕೆ.ಪೂಜಾರಿ ಮತ್ತು ಶ್ರೀಮತಿ ಮಲ್ಲಿಕಾ ಪ್ರಕಾಶ್ ದಂಪತಿ ಪೂಜಾವ್ರತ ಕೈಗೊಂಡಿದ್ದು, ಗಂಗಾಧರ ಕಲ್ಲಾಡಿ ಪೂಜೆಗೆ ಸಹಯೋಗ ನೀಡಿದರು.

ಬ್ಯಾಂಕ್‍ನ ಉಪ ಪ್ರಧಾನ ಪ್ರಬಂಧಕ ಮತ್ತು ಅಭಿವೃದ್ಧಿ ವಿಭಾಗದ ಮುಖ್ಯಸ್ಥ ಮೋಹನ್‍ದಾಸ್ ಹೆಜ್ಮಾಡಿ ಸುಖಾಗಮನ ಬಯಸಿ, ಅತಿಥಿಗಳನ್ನು ಪರಿಚಯಿಸಿದರು ಹಾಗೂ ಬ್ಯಾಂಕ್‍ನ ಸೇವಾ ವೈಖರಿ ಪ್ರಸ್ತಾಪಿಸಿ ಕಾರ್ಯಕ್ರ ಮ ನಿರ್ವಾಹಿಸಿದರು. ನಾಗೇಶ್ ಟಿ.ಪೂಜಾರಿ ಧನ್ಯವದಿಸಿದರು.

ಚಿತ್ರ  ವರದಿ : ರೋನ್ಸ್ ಬಂಟ್ವಾಳ್

By Suddi9

Leave a Reply

Your email address will not be published. Required fields are marked *