ಮಂಗಳೂರು : ಯೇನೆಪೋಯಾ ವೈದ್ಯಕೀಯ ಕಾಲೇಜಿನ ಶರೀರ ರಚನಾ ವಿಭಾಗದ ಉಪನ್ಯಾಸಕಿ ಡಾ. ಹೇಮಾ. ಎನ್ .ಅವರು ಸಲ್ಲಿಸಿರುವ “ಇವ್ಯಾಲ್ಯುವೇಶನ್ ಆಫ್ ಇನ್ ವಿಟ್ರೋ ಅಂಡ್ ಇನ್ ವೈವೋ ಆಂಟಿ ಕ್ಯಾನ್ಸರ್ ಆಕ್ಟಿವಿಟಿಸ್ ಓಫ್ ಸೈಪೆರುಸ್ ರೋಟನ್ಡ್ಯೂಸ್ “ಎಂಬ ಮಹಾಪ್ರಬಂಧಕ್ಕೆ ಯೇನೆಪೋಯಾ ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿದೆ. ಅವರು ಶರೀರ ರಚನಾ ವಿಭಾಗದ ಮುಖ್ಯಸ್ಥರಾದ ಡಾ. ರಾಮಕೃಷ್ಣ ಅವಧಾನಿ ಹಾಗೂ ಎಸ್. ಡಿ .ಎಂ. ಸಂಶೋಧನಾ ಕೇಂದ್ರದ ನಿರ್ದೇಶಕರಾದ ಡಾ. ಬಿ ರವಿಶಂಕರ್ ರವರ ಮಾರ್ಗದರ್ಶನದಲ್ಲಿ ಈ ಪ್ರಬಂಧವನ್ನು ಮಂಡಿಸಿದ್ದರು .
