ಸುದ್ದಿ9ಕೈಕಂಬ: ಗುರುಪುರದಟೈಲರ್ ಅಂಗಡಿಯೊಂದಕ್ಕೆ ಹೊಕ್ಕ ಖದೀಮನೋರ್ವ ಅಲ್ಲಿನ ಟೈಲರ್ ಮಹಿಳೆಗೆ ಸೀಮೆ ಎಣ್ಣೆ ಬೇಕಾ ಎಂದು ಕೇಳಿ ಹಣಕದ್ದು ಸ್ಥಳೀಯರಿಗೆ ಸಿಕ್ಕಿಬಿದ್ದ ಘಟನೆ ಶನಿವಾರ ವರದಿಯಾಗಿದೆ. ಈತನನ್ನು ತಲಪಾಡಿ ನಿವಾಸಿ ಸುನಿಲ್(36) ಎಂದು ಗುರುತಿಸಲಾಗಿದೆ.
ಮಧ್ಯಾಹ್ನ ಹನ್ನೆರಡು ಗಂಟೆಯ ವೇಳೆಗೆ ಆಗಂತುಕನೊಬ್ಬ ಗುರುಪುರದ ಟೈಲರ್ ಅಂಗಡಿಗೆ ಹೊಕ್ಕು ಮೇಡಂ, ನಮ್ಮಲ್ಲಿ ಸೀಮೆಎಣ್ಣೆ ತುಂಬಾ ಸ್ಟಾಕ್ ಇದೆ, ನಿಮಗೆ ಬೇಕಾ ಎಂದು ಕೇಳಿದ. ಆಗ ಮಹಿಳೆ ನಮಗೆ ಸೀಮೆ ಎಣ್ಣೆ ಅಗತ್ಯವಿರುವುದಿಲ್ಲ ಎಂದು ಹೇಳಿದರು. ಆಗ ಆ ಆಗಂತುಕ ಇಲ್ಲ ಮೇಡಂ ನಾವು ಚೀಪಾಗಿ ಕೊಡ್ತೀವಿ ಎಂದಾಗಲೂ ಮಹಿಳೆ ಬೇಡ ಎಂದು ಹೇಳಿದರು.
ಆಗ ಆ ಆಗಂತುಕ ಪಕ್ಕದ ಅಂಗಡಿಯವರಿಗೆ ಬೇಕಾಗಬಹುದಾ ಎಂದ ಕೇಳಿದಕ್ಕೆ ಆ ಮಹಿಳೆ ಅದು ಬೇಕಾದರೆ ನೀವೇ ಕೇಳಿ ಎಂದರು. ಕೊನೆಗೆ ಆ ಆಗಂತುಕ ದಂಬಾಲು ಬಿದ್ದದಕ್ಕೆ ಮಹಿಳೆ ಹೋಗಿ ಪಕ್ಕದ ಅಂಗಡಿಯವರಲ್ಲಿ ನಿಮಗೆ ಸೀಮೆ ಎಣ್ಣೆ ಬೇಕಾ ಎಂದು ಕೇಳಿದರು.
ಆಗ ಆ ಆಗಂತುಕ ಟೈಲರ್ ಅಂಗಡಿಯ ಮಹಿಳೆ ಟೇಬಲ್ ಮೇಲೆ ಇಟ್ಟಿದ್ದ ಮೂರು ಸಾವಿರ ನಗದನ್ನು ಎತ್ತಿ ರಿಕ್ಷಾ ಹತ್ತಿ ಪರಾರಿಯಾಗಿದ್ದಾನೆ.
ಇದೇ ವೇಳೆ ಮಹಿಳೆ ಬೊಬ್ಬೆ ಹೊಡೆದಾಗ ಸ್ಥಳೀಯರು ಸೇರಿಕೊಂಡು ವಿಷಯ ಕೇಳಿ ಅವಕ್ಕಾದರು. ಸ್ಥಳೀಯರು ಕೂಡಲೇ ಜೀಪ್ ಮೇಲೆ ಆತನ ರಿಕ್ಷಾವನ್ನು ಬೆನ್ನತ್ತಿ ಹೋದರು. ಆಗ ರಿಕ್ಷಾದಲ್ಲಿದ್ದಾತ ವಾಮಂಜೂರಿನಲ್ಲಿ ಸಿಕ್ಕಿಬಿದ್ದಿದ್ದಾನೆ.
ಈತನಿಗೆ ಚೆನ್ನಾಗಿ ಸತ್ಕಾರ ಮಾಡಿ ಬಳಿಕ ಬಜ್ಪೆ ಪೊಲೀಸರಿಗೆ ಒಪ್ಪಿಸಲಾಗಿದೆ. ವಿಚಾರಣೆಯ ವೇಳೆ ಈತನ ತನ್ನನ್ನು ಸುನಿಲ್ ಎಂದು ಹೇಳಿಕೊಂಡಿದ್ದು ಈತನ ವಯಸ್ಸು 36 ಆಗಿರಬಹುದು ಎಂದು ಹೇಳಿಕೊಂಡಿದ್ದೇನೆ.
ಇದೇ ರೀತಿ ಬೇರೆ ಬೇರೆ ರೀತಿಯಲ್ಲಿ ಕೈಕಂಬ ಗುರುಪುರ ಸುತ್ತಮುತ್ತ ಕಳ್ಳತನ ನಡೆಯುತ್ತಲೇ ಇದೆ ಎಂದು ಹೇಳಲಾಗಿದೆ
