ಬಂಟ್ವಾಳ:ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ|ಡಿ.ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಂಟ್ವಾಳ , ಬೆಳ್ತಂಗಡಿ ಅಖಿಲ ಕರ್ನಾಟಕ ರಾಜ್ಯ ಜನಜಾಗೃತಿ ವೇದಿಕೆ,ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು, ಮದ್ಯವರ್ಜನಾ ಶಿಬಿರ ವ್ಯವಸ್ಥಾಪನಾ ಸಮಿತಿ ವಗ್ಗ ವಲಯ ,ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ವಗ್ಗ ವಲಯ,ಯುವಕ ಮಂಡಲ ಸರಪಾಡಿ ,ಬಾಚಕೆರೆ ಶ್ರೀ ದುರ್ಗಾಪರಮೇಶ್ವರಿ ದೇವಿ ಮಂದಿರ. ವಗ್ಗ ವಲಯ ನವಜೀವನ ಸಮಿತಿ ಮತ್ತು ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದೊಂದಿಗೆ 952 ನೇ ಮದ್ಯವರ್ಜನ ಶಿಬಿರದ ಉದ್ಘಾಟನೆ ಬುಧವಾರ ಬಾಚಕೆರೆ ಶ್ರೀ ದುರ್ಗಾಪರಮೇಶ್ವರಿ ದೇವಿ ಮಂದಿರದ ಸಭಾಂಗಣದಲ್ಲಿ ಜರಗಿತು.

ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದ ತಂತ್ರಿ ದಿನೇಶ್ ಕೃಷ್ಣ ತಂತ್ರಿ ವರ್ಕಾಡಿ ಅವರು ಶಿಬಿರವನ್ನು ಉದ್ಘಾಟಿಸಿ ಮಾತನಾಡಿ ಹಿಂದಿನ ಕಾಲದಲ್ಲಿ ಶಿಕ್ಷಣದ ಕೊರತೆ,ಮೌಢ್ಯ ,ಸಹವಾಸ ದೋಷಗಳಿಂದ ಮದ್ಯ ವ್ಯಸನಿಗಳಾಗುತ್ತಿದ್ದರು.ಕೆಟ್ಟ ಹವ್ಯಾಸಗಳಿಂದ ಸರ್ವನಾಶಗೊಂಡಿರುವ ಉದಾಹರಣೆ ನಮ್ಮ ಮುಂದಿದೆ. ದುಶ್ಚಟಗಳಿಂದ ದೂರವಿದ್ದು ಉತ್ತಮ ವ್ಯಕ್ತಿಗಳಾದಾಗ ದೈವ ದೇವರ ಅನುಗ್ರಹ ದೊರೆಯುತ್ತದೆ.ಮದ್ಯ ಮುಕ್ತರು ಮುಂದಿನ ಜನಾಂಗಕ್ಕೆ ಮಾರ್ಗದರ್ಶಿ ಗಳಾಗಬೇಕು ಎಂದು ಹೇಳಿದರು. ಬಾಚಕೆರೆ ಶ್ರೀ ದುರ್ಗಾಪರಮೆಶ್ವರಿ ದೇವಿ ಮಂದಿರದ ಧರ್ಮದರ್ಶಿ ದೇಜಪ್ಪ ಬಾಚಕೆರೆ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ಬದುಕು ಶಾಶ್ವತವಲ್ಲ ,ಹೇಗೆ ಬದುಕಿದ್ದಾನೆ ಎಂಬುದು ಮುಖ್ಯ. ಡಾ|ಹೆಗ್ಗಡೆ ಅವರ ಸಹಾಯದಿಂದ ಜೀವನದಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯವಾಗಿದೆ.ದುಶ್ಚಟಗಳಿಂದ ದೂರವಿದ್ದುದರಿಂದ ಜನರ ಪ್ರೀತಿ,ವಿಶ್ವಾಸ,ಗೌರವ ಲಭ್ಯವಾಗಿದೆ.ಮದ್ಯ ಮುಕ್ತರು ಉತ್ತಮ ಜೀವನ ನಡೆಸುವಂತಾಗಬೇಕು ಎಂದು ಹೇಳಿದರು.
ಶ್ರೀ ಕ್ಷೇ.ಧ.ಗ್ರಾ.ಯೋಜನೆ ಜಿಲ್ಲಾ ನಿರ್ದೇಶಕ ಚಂದ್ರಶೇಖರ ನೆಲ್ಯಾಡಿ ಅವರು ಮಾತನಾಡಿ ಡಾ|ಡಿ. ವೀರೇಂದ್ರ ಹೆಗ್ಗಡೆ ಅವರ ದೂರದೃಷ್ಟಿತ್ವದಿಂದ ಮದ್ಯವರ್ಜನ ಶಿಬಿರಗಳಿಂದ ಮನಪರಿವರ್ತನೆಗೊಂಡು ಸಾವಿರಾರು ಕುಟುಂಬಗಳು ನೆಮ್ಮದಿಯ ಜೀವನ ನಡೆಸುವಂತಾಗಿದೆ. ಸಮಾಜದ ಏಳಿಗೆಗೆ ಸದಾ ಚಿಂತನೆ ನಡೆಸುವ ಹೆಗ್ಗಡೆ ಅವರ ಸದಾಶಯಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕಾಗಿದೆ ಎಂದರು.
ಅಲ್ಲಿಪಾದೆ ಚರ್ಚ್ ಧರ್ಮಗುರು ಫಾ|ಗ್ರೆಗರಿ ಪಿರೇರಾ ಅವರು ಮಾತನಾಡಿ ಶಿಬಿರಕ್ಕೆ ಸೇರಲು ಕೀಳರಿಮೆ ಬೇಡ. ಶಿಬಿರದಿಂದ ದೊರಕುವ ಮಾರ್ಗದರ್ಶನದಿಂದ ಹುಮ್ಮಸ್ಸು ದೊರಕಿ ಶಿಸ್ತಿನ ಮುಂದಿನ ಜೀವನಕ್ಕೆ ನಾಂದಿಯಾಗುವುದು ಎಂದರು. ಜಿ.ಪಂ. ಸದಸ್ಯ ಎಂ.ತುಂಗಪ್ಪ ಬಂಗೇರ ಅವರು ಮಾತನಾಡಿ ಜನರ ಕ್ಷೇಮ, ಆರೋಗ್ಯಗಳ ಬಗ್ಗೆ ಯಾವುದೇ ರಾಜಕಾರಣಿ ಮಾಡದ ಚಿಂತನೆಯನ್ನು ಡಾ|ಡಿ.ವೀರೇಂದ್ರ ಹೆಗ್ಗಡೆ ಅವರ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಾಕ್ಷಾತ್ಕರಿಸಿದ್ದಾರೆ. ದುಶ್ಚಟಗಳಿಂದ ಸಮಾಜ ಇಂದು ಹಿಂದುಳಿಯುವಂತಾಗಿದೆ. ದುಶ್ಚಟಗಳನ್ನು ದೂರೀಕರಿಸಿ ತನ್ನ ಹಾಗೂ ಸಮಾಜದ ಅಭ್ಯುದಯಕ್ಕೆ ಕಾರಣರಾಗಬೇಕು ಎಂದರು.ಬಂಟ್ವಾಳ ತಾ.ಜನ ಜಾಗೃತಿ ವೇದಿಕೆ ಅಧ್ಯಕ್ಷ ಪ್ರಕಾಶ್ ಕಾರಂತ ಅವರು ಡಾ|ಹೆಗ್ಗಡೆ ಅವರ ಆಶಯದಂತೆ ಗ್ರಾಮದ ಅಭಿವೃದ್ಧಿಯಿಂದ ದೇಶದ ಅಭಿವೃದ್ಧಿ . ದುಶ್ಚಟ ಮುಕ್ತ ಗ್ರಾಮ ನಮ್ಮ ಧ್ಯೇಯವಾಗಿದೆ ಎಂದು ಹೇಳಿದರು.
ಬಂಟ್ವಾಳ ತಾ.ಜನ ಜಾಗೃತಿ ವೇದಿಕೆ ನಿಕಟಪೂರ್ವ ಅಧ್ಯಕ್ಷ ಕಿರಣ್ ಹೆಗ್ಡೆ, ಜಿ.ಪಂ.ಸದಸ್ಯ ಬಿ.ಪದ್ಮಶೇಖರ್ ಜೈನ್,ಮಣಿನಾಲ್ಕೂರು ಗ್ರಾ.ಪಂ.ಅಧ್ಯಕ್ಷೆ ಗೀತಾ ಶ್ರೀಧರ ಪೂಜಾರಿ,ಬಂಟ್ವಾಳ ಯೋಜನಾಕಾರಿ ಕು.ಸುನಿತಾ ನಾಯಕ್,ಜನಜಾಗೃತಿ ವೇದಿಕೆ ವಗ್ಗ ವಲಯಾಧ್ಯಕ್ಷ ಪ್ರಮೋದ್ ಕುಮಾರ್ ರೈ,ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಯಚಂದ್ರ ಬೊಳ್ಮಾರ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಯುವಕ ಮಂಡಲ ಸರಪಾಡಿಯ ಅಧ್ಯಕ್ಷ ಸಂತೋಷ ಕುಮಾರ್ ಶೆಟ್ಟಿ,ಪದಾಕಾರಿಗಳಾದ ರಾಧಾಕೃಷ್ಣ ರೈ ಕೊಟ್ಟುಂಜ,ಎಸ್.ಪಿ.ಸರಪಾಡಿ,ವಗ್ಗ ವಲಯ ಜನಜಾಗೃತಿ ವೇದಿಕೆ ಸದಸ್ಯ ಮಾಣಿಕ್ಯರಾಜ್ ಜೈನ್,ಶಿವರಾಮ ಶೆಟ್ಟಿ,ಸೇವಾ ಪ್ರತಿನಿ ವಿಜಯಲಕ್ಷ್ಮಿ,ಲ್ಯಾಬ್ ಟೆಕ್ನಿಷಿಯನ್ಬಸವರಾಜ್,ಆರೋಗ್ಯ ಸಹಾಯಕಿ ಪ್ರೆಸಿಲ್ಲ ,ವಿವಿಧ ಒಕ್ಕೂಟಗಳ ಪದಾಕಾರಿಗಳು,ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.
ಯುವಕ ಮಂಡಲದ ಕಾರ್ಯದರ್ಶಿ ಕಿರಣ್ ಸರಪಾಡಿ ಅವರು ಸ್ವಾಗತಿಸಿದರು.ಶಿಬಿರಾಧಿಕಾರಿ ಗಣೇಶ್ ಆಚಾರ್ಯ ಪ್ರಸ್ತಾವಿಸಿದರು.ಸೇವಾ ಪ್ರತಿನಿಧಿ ಸರೋಜಿನಿ ವಂದಿಸಿದರು.ಕೃಷಿ ಅಧಿಕಾರಿ ನಾರಾಯಣ ಮತ್ತು ವಗ್ಗ ವಲಯ ಮೇಲ್ವಿಚಾರಕಿ ಭವಾನಿ ಕಾರ್ಯಕ್ರಮ ನಿರೂಪಿಸಿದರು.
