ಬಂಟ್ವಾಳ:ಪರಿಸರವನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ,ನಾವು ಈ ಭೂಮಿಯ ಮೇಲೆ ಹಕ್ಕನ್ನು ಚಲಾಯಿಸುತ್ತಿದ್ದೇವೆ.ಅದರೆ ಕರ್ತವ್ಯವನ್ನು ಮರೆತಿದ್ದೇವೆ.ನಾವು ನಮ್ಮ ಕರ್ತವ್ಯ ಮರೆತರೆ ಪ್ರಕೃತಿ ವಿಕೋಪಗಳ ಮೂಲಕ ನೆನಪಿಸುತ್ತದೆ.ನಾವು ಪರಿಸರ ಸಂರಕ್ಷಣೆಯ ಕರ್ತವ್ಯದಲ್ಲಿ ಜಾಗೃತವಾಗುವುದು ಮುಖ್ಯ ಎಂದು ಹಿರಿಯ ಸಿವಿಲ್ ನ್ಯಾಯಾದೀಶ ಮತ್ತು ಜೆ.ಎಂ.ಎಫ್.ಸಿ. ಬಂಟ್ವಾಳ ಹಾಗೂ ತಾಲೂಕು ಕಾನೂನು ಸೇವೆಗಳ ಅಧ್ಯಕ್ಷ ಚಂದ್ರಶೇಖರ ಯು.ಅವರು ಹೇಳಿದರು.

ಅವರು ಬಂಟ್ವಾಳ ತಾಲೂಕು ಕಾನೂನು ಸೇವೆಗಳ ಸಮಿತಿ,ಬಂಟ್ವಾಳ ವಕೀಲರ ಸಂಘ, ಬಂಟ್ವಾಳ ಅರಣ್ಯ ಇಲಾಖೆ, ಪಡಿ ಮಂಗಳೂರು,ಬಂಟ್ವಾಳ ಶಿಕ್ಷಣ ಸಂಪನ್ಮೂಲ ಕೇಂದ್ರ ಮತ್ತು ಸುರಿಬೈಲು ದ.ಕ.ಜಿ.ಹಿ.ಪ್ರಾ.ಶಾಲೆ ಇದರ ಜಂಟಿ ಆಶ್ರಯದಲ್ಲಿ ಜೂ.29 ರಂದು ಜರಗಿದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕೊಳ್ನಾಡು ಗ್ರಾ.ಪಂ.ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಬಂಟ್ವಾಳ ವಕೀಲರ ಸಂಘದ ಅಧ್ಯಕ್ಷ ಬಿ.ವಿ.ಶೆಣೈ, ಸರಕಾರಿ ನ್ಯಾಯವಾದಿ ಸತೀಶ್ ಕುಮಾರ್ ಶಿವಗಿರಿ,ಜಿ.ಪಂ.ಸದಸ್ಯಎಸ್.ಎಂ.ಮಹಮ್ಮದ್,ತಾ.ಪಂ.ಸದಸ್ಯ ನಾರಾಯಣ ಶೆಟ್ಟಿ,ಬಂಟ್ವಾಳ ವಲಯ ಅರಣ್ಯ ಸಂರಕ್ಷಣಾ„ಕಾರಿ ಸುಬ್ರಹ್ಮಣ್ಯರಾವ್, ಬಂಟ್ವಾಳ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ ,ಸುರಿಬೈಲು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸುಲೈಮಾನ್ ಅಪೆಲೋ, ವಕೀಲರ ಸಂಘದ ಕಾರ್ಯದರ್ಶಿ ರಾಜರಾಮ್ ನಾಯಕ್,ಇತರ ಪದಾ„ಕಾರಿಗಳು, ಶಿಕ್ಷಣ ಸಂಪನ್ಮೂಲ ಕೇಂದ್ರದ ಸದಸ್ಯರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಗಿಡಗಳನ್ನು ನೆಡಲಾಯಿತು.ಸಸಿಗಳನ್ನು ವಿತರಿಸಲಾಯಿತು.ವಿದ್ಯಾರ್ಥಿಗಳಿಗೆ ಪರಿಸರ ದಿನಾಚರಣೆ ಪ್ರಯುಕ್ತ ಏರ್ಪಡಿಸಿದ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷ ಎಸ್.ಎಂ.ಅಬೂಬಕ್ಕರ್ ಅವರು ಸ್ವಾಗತಿಸಿದರು.ಎ.ಕೆ ಹ್ಯಾರಿಸ್ ಬಹುಮಾನಿತರ ಪಟ್ಟಿ ವಾಚಿಸಿದರು.ಆಯಿಷಾತ್ ಸಫ್ರಿನಾ ವಂದಿಸಿದರು.ಮಹಮ್ಮದ್ ಮಾರಿಪಳ್ಳ ಪರಿಸರ ಗೀತೆ ಹಾಡಿದರು.ನ್ಯಾಯವಾದಿ ಶಿವಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು.
