ಬಂಟ್ವಾಳ: ಸಂಚಾರಕ್ಕೆ ಅಡಚಣೆಯಾಗಿರುವ  ಹೊಂಡಗೊಂಡಿಗಳಿಂದ ತುಂಬಿರುವ ರಸ್ತೆಯನ್ನು ರಿಪೇರಿ ಮಾಡಿಕೊಡದ ಹಿನ್ನಲೆಯಲ್ಲಿ ಸಾರ್ವಜನಿಕರು ವಾಹನಗಳನ್ನು ರಸ್ತೆಯಲ್ಲಿ ನಿಲ್ಲಿಸಿ ಹಠಾತ್ ಪ್ರತಿಭಟನೆಗೆ ಮುಂದಾದ ಘಟನೆ ಪುರಸಭಾ ವ್ಯಾಪ್ತಿಯ ಜಕ್ರಿಬೆಟ್ಟುವಿನಲ್ಲಿ ನಡೆದಿದೆ. ಬಂಟ್ವಾಳ ಜಕ್ರಿಬೆಟ್ಟು ಅಗ್ರಾಹಾರ ರಸ್ತೆಯು ಕಳೆದ 6 ವರ್ಷಗಳಿಂದ ಡಾಮಾರು ಕಾಣದೆ ರಸ್ತೆಯಲ್ಲಿ ದೊಡ್ಡ ಗುಂಡಿಗಳು ಆಗಿ ಸಂಚಾರಕ್ಕೆ ತೊಂದರೆಯಾಗಿದೆ.7

2 (3)

3 (3)

5

ಪುರಸಭಾ ವ್ಯಾಪ್ತಿಯ 2ಮತ್ತು 3 ಹಾಗೂ 5ನೇ ವಾರ್ಡ್ ಗಳಿಗೆ ಸಂಬಂದಪಟ್ಟ ರಸ್ತೆಯ ರಿಪೇರಿ ಮಾಡಿ ಎಂದು ಸಾಕಷ್ಟು ಬಾರಿ ಸಂಬಂದ ಪಟ್ಟ ಪುರಸಭಾ ಇಲಾಖೆಗೆ ದೂರು ನೀಡಿದರು ಯಾವುದೇ ಸ್ಪಂದನೆ ನೀಡಿಲ್ಲ ಎಂದು ಸ್ಥಳಿಯರು ಆರೋಪಿಸಿ ದಿಡೀರ್ ಪ್ರತಿಭಟನೆಗೆ ಮುಂದಾದರು. ಒಳಚರಂಡಿ ಯೋಜನೆ ಮತ್ತು ಎರಡನೇ ಹಂತದ ಕುಡಿಯುವ ನೀರಿನ ಯೋಜನೆಯ ಹಿನ್ನಲೆಯಲ್ಲಿ ರಸ್ತೆಯನ್ನು ಅಗೆದು ಹೊಂಡ ಗುಂಡಿಗಳನ್ನು ಮಾಡಲಾಗಿದೆ. ಅ ಬಳಿಕ ರಸ್ತೆಯ ಗುಂಡಿಗಳನ್ನು ಮುಚ್ಚಿ ಡಾಮಾರಿಕರಣ ಮಾಡಬೇಕಿತ್ತು. ಆದರೆ ಯೋಜನೆಯ ಕಾಮಗಾರಿಗಳು ಮುಗಿದ ಬಳಿಕ ಇಲಾಖೆ ರಸ್ತೆಯ ವಿಷಯಕ್ಕೆ ಬರದೆ ತಮ್ಮ ಕೈತೊಳೆದುಕೊಂಡು ಕುಳಿತುಕೊಂಡಿದ್ದಾರೆ ಎಂದು ಆರೋಪವ್ಯಕ್ತಪಡಿಸಿದ್ದಾರೆ. ರಿಕ್ಷಾ ಇತರೆ ಬಾಡಿಗೆ ವಾಹನಗಳು ದಮ್ಮಯ್ಯ ಅಂದರೂ ಬರುವುದಿಲ್ಲ.

ಈ ಪ್ರದೇಶದಲ್ಲಿ ಶಾಲೆ ಮತ್ತು ಪ್ರಾರ್ಥನಾ ಮಂದಿರ ಜೊತೆಗೆ ಸುಮಾರು ಮನೆಗಳಿದ್ದು ಸಂಚಾರಕ್ಕೆ ತೊಂದರೆಯಾಗಿದೆ, ಜೊತೆಗೆ ಹೆರಿಗೆ ಮತ್ತು ಇನ್ನಿತರ ಆರೋಗ್ಯ ಸಮಸ್ಯೆಗಳ ಬಂದಾಗ ಅಂತಹ ಪರಿಸ್ಥಿತಿಯಲ್ಲೂ ವಾಹನಚಾಲಕರು ಬರಲು ಒಪ್ಪುವುದಿಲ್ಲ. ಈ ರಸ್ತೆಯಲ್ಲಿ ಖಾಸಗಿ ಬಸ್ಸು ಸಂಚಾರ ಮಾಡುತ್ತಿತ್ತು ಇತ್ತೀಚಿನ ದಿನಗಳಲ್ಲಿ ರಸ್ತೆಯ ಅವ್ಯವಸ್ಥೆಯಿಂದ ಅವರು ಸಂಚಾರವನ್ನು ನಿಲ್ಲಿಸಿದ್ದಾರೆ. ಪುರಸಭೆಯ ಅಲಸ್ಯದಿಂದಾಗಿ ಇಲ್ಲಿನ ಸಾರ್ವಜನಕರು ಪ್ರಯಾಣಕ್ಕೆ ತೊಂದರೆ ಅನುಭವಿಸುವಂತಾಗದೆ ಎಂದು ಹೇಳುತ್ತಾರೆ. ಕಳೆದ ಮಳೆಗಾಲದಲ್ಲೂ ಇದೇ ರೀತಿಯ ತೊಂದರೆ ಅನಭವಿಸುವಂತಾಗದೆ. ಅಲ್ಲದೆ ಹದಗೆಟ್ಟ ರಸ್ತೆಯಿಂದ ಅಪಘಾತಗಳು ನಡೆದು ಪ್ರಾಣಹಾನಿಯಾಗುವ ಮೊದಲು ಇಲಾಖೆ ಎಚ್ಚೆತ್ತುಕೊಳ್ಳಬೇಕಾಗಿದೆ.

ಇಲಾಖೆ ರಸ್ತೆ ಡಾಮಾರಿಕರಣಕ್ಕೆ ಹಣ ಬಿಡುಗಡೆಯಾಗಿದೆ ಎಂದು ಒಂದು ವರ್ಷಗಳಿಂದ ಹೇಳಿಕೊಂಡು ಬರುತ್ತಿದೆ ವಿನಃ ಡಾಮರೀಕರಣ ಮಾಡುತ್ತಿಲ್ಲ. ಮಳೆ ನೀರು ಹರಿದುಹೋಗಲು ಜರಂಡಿಯೂ ಇಲ್ಲದೆ ರಸ್ತೆಯೇ ಚರಂಡಿಯಾಗಿದೆ. ಕನಿಷ್ಟ ಮಳೆಗಾಲಕ್ಕೆ ಸಂಚಾರಕ್ಕೆ ಗುಂಡಿ ಮುಚ್ಚಿ ತೇಪೆ ಹಾಕುವ ಕಾರ್ಯವನ್ನು ಕೂಡಾ ಮಾಡಿಲ್ಲ ಎನ್ನುವುದು ಇವರ ಆರೋಪ. ಸ್ಥಳೀಯ ಪ್ರಮುಖರಾದ ಕಾಂತಪ್ಪ ಪೂಜಾರಿ, ಮಹಮ್ಮದ್ ಹುಸೈನ್, ಪ್ರಕಾಶ್ ಸಪಲ್ಯ, ಗುರುದತ್ತ ನಾಯಕ್ ಜಕ್ರಿಬೆಟ್ಟು, ಹೇಮಂತ್ ಜಕ್ರಿಬೆಟ್ಟು, ಶಿವರಾಮ ಶೆಟ್ಟಿ, ವಸಂತ ಭಂಡಾರಿ ಮೊದಲಾದವರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *