ಬಂಟ್ವಾಳ:ಆರೆಸ್ಸೆಸ್ ಕಾರ್ಯಕರ್ತ,ಬಿಜೆಪಿ ಮುಖಂಡ,ಕಾವಳಮೂಡೂರು ಗ್ರಾಮದ ಇಚ್ಚಿಲ ನಿವಾಸಿ ಬೇಬಿ ಶೆಟ್ಟಿ (55) ಅವರು ಹೃದಯಾಘಾತದಿಂದ ಜು.2ರಂದು ಸ್ವಗೃಹದಲ್ಲಿ ನಿಧನ ಹೊಂದಿದರು.
ಮೃತರು ಪತ್ನಿ,ಸಹೋದರ,ಸಹೋದರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.0207pkt4(baby Shetty)

ಪ್ರಗತಿಪರ ಕೃಷಿಕರಾಗಿದ್ದ ಅವರು ಕಾವಳಮೂಡೂರು ಬಿಜೆಪಿ ವಲಯ ಸಮಿತಿ ಅಧ್ಯಕ್ಷರಾಗಿದ್ದರಲ್ಲದೆ ಪಕ್ಷದ ವಿವಿಧ ಜವಾಬ್ದಾರಿಯನ್ನು ನಿರ್ವಹಿಸಿದ್ದರು.1982 ರಲ್ಲಿ ಕಾವಳಕಟ್ಟೆಯಲ್ಲಿ ಗಿರಿಜಾ ಶಂಕರ ಮಿತ್ರ ಮಂಡಳಿಯ ಸ್ಥಾಪಿಸಿದ್ದ ಅವರು.ಸ್ಥಳೀಯವಗಿ ಧಾರ್ಮಿಕ,ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಜನಾನುರಾಗಿಯಾಗಿದ್ದರು. ಬಂಟ್ವಾಳ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಆನಂದ ಜಿ.,ಬಂಟ್ವಾಳ ಕ್ಷೇತ್ರ ಪ್ರ.ಕಾರ್ಯದರ್ಶಿ  ರಾಮದಾಸ್ ಬಂಟ್ವಾಳ,ಜಿ.ಪಂ.ಸದಸ್ಯ ಬಿ.ಪದ್ಮಶೇಖರ್ ಜೈನ್,ತಾಲೂಕು ಆಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಕೆ.ಮಾಯಿಲಪ್ಪ ಸಾಲ್ಯಾನ್,ಕಾವಳಪಡೂರು ಗ್ರಾ.ಪಂ.ಅಧ್ಯಕ್ಷ ಪ್ರಮೋದ್ ಕುಮಾರ್ ರೈ,ಗ್ರಾ.ಪಂ.ಸದಸ್ಯರಾದ ಮೋಹನ ಆಚಾರ್ಯ,ಚಂದ್ರಶೇಖರ ಕರ್ಣ,ಕಜೆಕಾರು ಸಿ.ಎ.ಬ್ಯಾಂಕ್ ಅಧ್ಯಕ್ಷ ಹರೀಶ್ಚಂದ್ರ ಪೂಜಾರಿ ಮತ್ತಿತರರು ಅಂತಿಮದರ್ಶನ ಪಡೆದರು.
ಸಂಸದ ನಳಿನ್ ಕುಮಾರ್ ಕಟೀಲು,ಆರೆಸ್ಸೆಸ್ ಪ್ರಮುಖ ಡಾ|ಪ್ರಭಾಕರ ಭಟ್,ಬಿಜೆಪಿ ಮುಖಂಡರಾದ ಬಿ.ನಾಗರಾಜ ಶೆಟ್ಟಿ,ರಾಜೇಶ್ ನಾಕ್ ಉಳಿಪಾಡಿಗುತ್ತು,ಎಂ.ತುಂಗಪ್ಪ ಬಂಗೇರ,ದೇವದಾಸ ಶೆಟ್ಟಿ ಅವರು ಸಂತಾಪ ವ್ಯಕ್ತ ಪಡಿಸಿದ್ದಾರೆ.

By suddi9

Leave a Reply

Your email address will not be published. Required fields are marked *