ಕೈಕಂಬ: ಕರಿಯಂಗಳ ಗ್ರಾಮದ ಮಂಗಾಜೆ ರಸ್ತೆ ಕಾಂಕ್ರೀಟಿಕರಣಕ್ಕೆ 2016-17 ಸಾಲಿನ 14ನೇ ಹಣಕಾಸು ಆಯೋಗದ ಅನುದಾನದಿಂದ ಮಂಜುರಾದ ಎಸ್ ಸಿ ಎಸ್ ಟಿ ಮೀಸಲಾತಿಯಲ್ಲಿ 2 ಲಕ್ಷ ಅನುದಾನದ ಕಾಂಕ್ರೀಟ್ ರಸ್ತೆಯ ಉದ್ಘಾಟನೆಯು ಆ.3 ರಂದು ಭಾನುವಾರ ಮಂಗಾಜೆಯಲ್ಲಿ ನೆರವೇರಿತು.
ಕರಿಯಂಗಳ ಗ್ರಾಮ ಪಂಚಾಯತ್ ಅಧ್ಯಕ್ಷೆ ಚಂದ್ರಾವತಿ, ಉಪಾಧ್ಯಕ್ಷ ಚಂದ್ರಶೇಖರ ರಾವ್ , ತಾಲೂಕು ಪಂಚಾಯತ್ ಸದಸ್ಯ ಯಶವಂತ ಪೊಳಲಿ, ಮಾಜಿ ತಾ. ಪಂ.ಸದಸ್ಯ ವೆಂಕಟೇಶ್ ನಾವಡ, ಪಂ ಸದಸ್ಯರಾದ ಸುರೇಶ್ ಮಣಿಕಂಠಪುರ, ಲೋಕೇಶ್ ಭರಣಿ, ನವಾಝ್, ಸದಸ್ಯೆ ಶಕುಂತಳ ಮಾಜಿ ಗ್ರಾ. ಪಂ ಸದಸ್ಯೆ ಯಮುನ ಮತ್ತು ಸ್ಥಳೀಯ ಮುಖಂಡರಾದ ಸುಕೇಶ್ ಚೌಟ, ಚಂದ್ರಶೇಖರ ಶೆಟ್ಟಿ, ರಾಜೇಶ್ ಹೆಗ್ಡೆ ಮತ್ತು ಗುತ್ತಿಗೆದಾರ ಯಶೋದರ ಉಪಸ್ಥಿತರಿದ್ದರು. ಪಿಡಿಒ ನಯನ ಕಾರ್ಯಕ್ರಮ ನಿರ್ವಹಿಸಿದರು.

