ವಿಟ್ಲ: ದ ಕ ಜಿ ಪಂ ಹಿ ಪ್ರಾಥಮಿಕ ಶಾಲೆ ವಿದ್ಯಾವಿಹಾರ ಕಲ್ಲಜೇರ ಅಳಿಕೆ ಇಲ್ಲಿ ಶತಾಬ್ದಿ ಡ್ಯಾನ್ಸ್ ಟ್ರೂಪ್ ಇವರಿಂದ ನಡೆಸಲ್ಪಡುವ ಡ್ಯಾನ್ಸ್ ತರಗತಿಯ ಉದ್ಘಾಟನಾ ಸಮಾರಂಭವು ನಡೆಯಿತು. ಅಳಿಕೆಯ ನಿವೃತ್ತ ಶಿಕ್ಷಕ ಯಶೋಧರ ಬಂಗೇರ ಉದ್ಘಾಟಿಸಿದರು. ಅಳಿಕೆ ಗ್ರಾಮ ಪಂಚಾಯತ್ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ವಿಟ್ಲ ಅರಮನೆಯ ಕೃಷ್ಣಯ್ಯ ಕೆ, ಆರ್ ಕೆ ಆರ್ಟ್ಸ್ ಚಿಣ್ಣರ ಮನೆ ವಿಟ್ಲ ಇದರ ರಾಜೇಶ್ ವಿಟ್ಲ, ಶಾಲಾ ಮುಖ್ಯ ಶಿಕ್ಷಕಿ ಗೀತಾ, ಹಳೆವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಗೋವಿಂದರಾಜ್, ಅಧ್ಯಕ್ಷ ಹರೀಶ್ ಇವರು ಭಾಗವಹಿಸಿದ್ದರು. ಎಸ್ ಡಿ ಎಂ ಸಿ ಅಧ್ಯಕ್ಷ ನಿತ್ಯಾನಂದ ನೆಕ್ಕಿತ್ತಪುಣಿ ಸ್ವಾಗತಿಸಿದರು. ನೃತ್ಯಗುರು ಶಿವರಾಂ ಕೆ ಪ್ರಾಸ್ತಾವಿಸಿದರು. ಚಂದ್ರಹಾಸ ನೆಕ್ಕಿತ್ತಪುಣಿ ವಂದಿಸಿದರು. ಅಂಗನವಾಡಿ ಕಾರ್ಯಕರ್ತೆ ಲತಾ ನಿರೂಪಿಸಿದರು. ಗಾಯಕ ಪ್ರವೀಣ್ ಜಯ ವಿಟ್ಲ, ಆಲ್ಬಂ ನಟ ಪದ್ಮಶ್ರೀ ಚಾರ್ವಾಕ, ಶಿಕ್ಷಕರು ಮತ್ತು ಮಕ್ಕಳು ಉಪಸ್ಥಿತರಿದ್ದರು.
