ವಿಟ್ಲ: ಗ್ರಂಥಗಳಿಂದ ವಿದ್ಯೆಗೆ ಬಲ ಎಲ್ಲ ಪುಸ್ತಕಗಳು ಇರುವುದು ಉಪಯೋಗಕ್ಕಾಗಿ ಪ್ರತಿಯೊಂದು ಪುಸ್ತಕವು ಒಂದಲ್ಲ ಒಂದು ರೀತಿಯಲ್ಲಿ ನಮಗೆ ಉಪಕಾರಿಯಾಗುತ್ತದೆ. ಈ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಗ್ರಂಥಾಲಯದಲ್ಲಿ ದೊರೆಯುವ ಅನೇಕ ಗ್ರಂಥಗಳು, ದಿನಪತ್ರಿಕೆಗಳು,ಪುಸ್ತಕಗಳನ್ನು ಓದುವುದರ ಮೂಲಕ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು. ಗ್ರಂಥಾಲಯವನ್ನು ಸದಾ ಬೆಳೆಸುತ್ತಾ ಅದರ ಬಳಕೆಯನ್ನೂ ಹೆಚ್ಚಿಸುತ್ತಾ ಹೋಗಬೇಕು ಎಂದು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಗ್ರಂಥಪಾಲಕರಾದ ರಾಮ ಕೆ.ಇವರುಹೇಳಿದರು.

ಅವರು ವಿಠಲ ಪದವಿ ಪೂರ್ವ ಕಾಲೇಜಿನ ಗ್ರಂಥಾಲಯದಲ್ಲಿ ವಿಜ್ಞಾನ ಸಂಘ ಹಾಗೂ ಗ್ರಂಥಾಲಯ ಸಮಿತಿ ಇವರು ಜಂಟಿಯಾಗಿ ಆಯೋಜಿಸಿದ ಪುಸ್ತಕ ಪ್ರದರ್ಶನ ಮಾಲಿಕೆಯಲ್ಲಿ ವಿಜ್ಞಾನ ಪುಸ್ತಕ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು. ಗ್ರಂಥಪಾಲಕರಾದ ರಮೇಶ್ ಯಂ.ಯಸ್ ಮಾತನಾಡಿ, ಪುಸ್ತಕಪ್ರದರ್ಶನಗಳು ಗ್ರಂಥಾಲಯದಲ್ಲಿ ದೊರೆಯುವ ಎಲ್ಲಾ ಪುಸ್ತಕಗಳ ಮಾಹಿತಿಯನ್ನು ಒದಗಿಸುತ್ತವೆ ಎಂದರು. ಪ್ರಾಂಶುಪಾಲರಾದ ಎ.ಯಸ್. ಆದರ್ಶರು ಸಭಾಧ್ಯಕ್ಷತೆಯನ್ನು ವಹಿಸಿ ಆಸಕ್ತಿಯಿರುವ ಪುಸ್ತಕಗಳನ್ನು ಓದಲು ಪ್ರಾರಂಭಿಸಿ ಇನ್ನೂ ಹೆಚ್ಚಿನ ಪುಸ್ತಕಗಳತ್ತ ಗಮನ ಹರಿಸಲು ಕರೆ ನೀಡಿದರು.
ಉಪನ್ಯಾಸಕರಾದ ಪಿ.ಗೋವಿಂದ ಭಟ್,ಯು.ಯಸ್ ವಿಶ್ವೇಶ್ವರ ಭಟ್, ರಘುವೀರ, ಸುಚೇತನ್ ಜೈನ್, ಪಿ.ಶಂಕರನಾರಯಣ ಭಟ್, ಪ್ರಕಾಶ್ ನಾಯಕ್, ರೂಪಶ್ರೀ ಡಿ, ಪ್ರಮೀಳಾ ಕೆ ಆರ್, ಆಶಾ, ವಿನುತಾ ಉಪಸ್ಥಿತರಿದ್ದರು. ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳಾದ ಆಶಾ, ಚಂದನ ಪ್ರಾರ್ಥಿಸಿ, ಕಲ್ಪಿತಾ ಸ್ವಾಗತಿಸಿದರು. ಮಹಮ್ಮದ್ ಜಾಬಿರ್ ವಂದಿಸಿದರು. ನಾಕ್ಸನ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.
