ಮುಂಬಯಿ : ಮುಂಬಯಿ ಮಹಾನಗರದಲ್ಲಿ ಇಂದಿಲ್ಲಿ ಧಾರಾಕಾರವಾಗಿ ಸುರಿಯುತ್ತಿದ್ದ ಮಳೆಯ ಮಧ್ಯಾಂತರದಲ್ಲಿ ಯುವ ಪತ್ರಕರ್ತ, ಪರಿಸರ ಪ್ರೇಮಿ ರೋನ್ಸ್ ಬಂಟ್ವಾಳ್ ತನ್ನ ನಿವಾಸದ ಹೂದೋಟದಲ್ಲಿ ಪಕ್ಷಿಪ್ರೇಮದ ಝಳಕವನ್ನು ಸೆರೆಯಿಡಿದ ಕ್ಷಣಗಳು.
ತನ್ನ ಅಂಧೇರಿ ಪೂರ್ವದ ಚಕಾಲದಲ್ಲಿನ ಲವ್ವ್ಹೀವ್ ನಿವಾಸದ ಗ್ಯಾಲರಿಯಲ್ಲಿ ಹತ್ತಾರು ಹೂಗಿಡಗಳಿಂದ ಸೃಷ್ಠಿಸಿದ ಪುಷ್ಪಉದ್ಯಾನದಲ್ಲಿ ಅನೇಕ ಪಕ್ಷಿಗಳಿಗೆ ಆಸರೆಯನ್ನೀಡಿದ್ದಾರೆ. ಕೆಲವೊಂದು ಕಾಗೆಗಳು, ಗುಬ್ಬಚ್ಚಿ, ಪಾರಿವಾಳ, ಗಿಳಿ, ಮತ್ತಿತರ ಪಕ್ಷಿಗಳೂ ಈ ಉಪವನದಲ್ಲಿ ಆಸರೆ ಪಡೆಯುತ್ತಿವೆ. ಪಕ್ಷಿಗಳಿಗಾಗಿಗೇ ತಯಾರಿಸಲ್ಪಟ್ಟ ಆಹಾರ, ಕ್ಯಾಲ್ಸಿಯಂ, ನೀರು ಇನ್ನಿತರ ಆಹಾರವನ್ನು ಸೇವಿಸಿ ಪುಷ್ಪಗಿಡಗಳ ಮಧ್ಯೆ ಕಾ… ಕಾ.. ಚಿಲಿಪಿಲಿ… ಎಂದು ಮುದ್ದಾಗಿ ಅಡ್ಡಾಡಿ ನರ್ತಿಸುವ ಕ್ಷಣಗಳು ಪರಿಸರ ಪ್ರಿಯರಿಗಂತೂ ಮುದ ನೀಡುವಂತಿದೆ.
ಚಿತ್ರ: ತಾರಾ ಆರ್.ಬಂಟ್ವಾಳ್.



