ಮೂಡುಬಿದಿರೆ: ದಿಗಂಬರ ಜೈನ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಸಂಸತ್ತು ಹಾಗೂ ವಿವಿಧ ಸಂಘಗಳ ಉದ್ಘಾಟನಾ ಸಮಾರಂಭ ಶನಿವಾರ ಶಾಲಾ ಅಮೃತ ಮಹೋತ್ಸವ ಕಟ್ಟಡದಲ್ಲಿ ನೆರವೇರಿತು.ಶಾಲಾ ಸಂಚಾಲಕ ಬಿ.ಪ್ರತಾಪ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿ, ಮಕ್ಕಳಿಗೆ ಶಿಕ್ಷಣದ ಜೊತೆಗೆ ಶಿಕ್ಷಕೇತರ ಚಟುವಟಿಕೆಗಳು ಮಕ್ಕಳಿಗೆ ಅತೀ ಅಗತ್ಯ. ಮಕ್ಕಳು ಇದರ ಸಂಪೂರ್ಣ ಪ್ರಯೋಜನ ಪಡೆಯಬೇಕು ಎಂದರು. ಬಸದಿಗಳ ಮೊಕ್ತೇಸರ ದಿನೇಶ್ ಕುಮಾರ್ ಆನಡ್ಕ ಅಧ್ಯಕ್ಷತೆ ವಹಿಸಿದ್ದರು.
ವಿದ್ಯಾರ್ಥಿ ಜೀವನದಲ್ಲಿ ಸಂಸತ್ತಿನ ಬಗ್ಗೆ ತಿಳಿದುಕೊಂಡಲ್ಲಿ ಭವಿಷ್ಯತ್ತಿನಲ್ಲಿ ರಾಜಕೀಯ ಅರಿವು ಮೂಡಲು ಸಹಕಾರಿಯಾಗುತ್ತದೆ ಎಂದರು.ಶಾಲಾ ಸಂಸತ್ತಿನ ಎಲ್ಲಾ ಮಂತ್ರಿಗಳಿಗೆ ಪದಕಧಾರಣೆ ಹಾಗೂ ಶಾಲಾ ವಿವಿಧ ಸಂಘಗಳ ಕಾರ್ಯದರ್ಶಿಗಳಿಗೆ ಕಡತಗಳನ್ನು ನೀಡಲಾಯಿತು.ಶಾಲಾ ಮುಖ್ಯ ಶಿಕ್ಷಕ ಶಶಿಕಾಂತ್ ವೈ, ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ರವಿಪ್ರಸಾದ್ ಶೆಟ್ಟಿ, ಉಪಾಧ್ಯಕ್ಷವಸಂತ್ ನಾಯಕ್, ತಾಯಂದಿರ ಸಮಿತಿಯ ಅಧ್ಯಕ್ಷ ಶಾಲಿನಿ, ಉಪಾಧ್ಯಕ್ಷ ನಂದಾ, ಶಾಲಾ ನೂತನ ನಾಯಕಜ್ಞಾನೇಶ್, ಶಾಲಾ ಉಪನಾಯಕಿ ತನುಶ್ರೀ ಉಪಸ್ಥಿತರಿದ್ದರು.
