ಮೂಡುಬಿದಿರೆ: ಇಲ್ಲಿನ ನ್ಯಾಯಾಲಯದ ನ್ಯಾಯಾಧೀಶ ಸತೀಶ್ ಎಸ್.ಟಿ. ಅವರು ಬೆಳ್ತಂಗಡಿ ನ್ಯಾಯಾಲಯಕ್ಕೆ ವರ್ಗಾವಣೆಯಾಗಿದ್ದು, ಮೂಡುಬಿದಿರೆ ವಕೀಲರ ಸಂಘದ ವತಿಯಿಂದ ಬೀಳ್ಕೊಡುವ ಸಮಾರಂಭ ಹಮ್ಮಿಕೊಳ್ಳಲಾಯಿತು.ವಕೀಲರ ಸಂಘದ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್ ಸಮಾರಂಭ ಉದ್ದೇಶಿಸಿ ಮಾತನಾಡುತ್ತಾ ಸಾರ್ವಜನಿಕರು ನ್ಯಾಯಾಲಯದ ಬಗ್ಗೆ ಭರವಸೆ ಇಟ್ಟಿದ್ದಾರೆ. ಆ ಭರವಸೆಯನ್ನು ಕಾಪಾಡಿಕೊಳ್ಳುವುದರಲ್ಲಿ ನ್ಯಾಯಾಧೀಶರಿಗೆ ಮತ್ತು ವಕೀಲರಿಗೆ ಬಹಳಷ್ಟು ಜವಬ್ದಾರಿ ಇದೆ ಹಾಗೂ ನ್ಯಾಯಾಲಯದ ಗೌರವ ಮತ್ತು ವಕೀಲ ವೃತ್ತಿಯ ಗೌರವವನ್ನು ಕಾಪಾಡಿಕೊಳ್ಳುವುದರಲ್ಲಿ ವಕೀಲರ ಪಾತ್ರ ಬಹಳ ಪ್ರಾಮಖ್ಯವಾದದ್ದು ಎಂದರು. ನ್ಯಾಯವಕೀಲ ಕೆ. ಆರ್. ಪಂಡಿತ್, ಎಂ. ಎಸ್ ಕೋಟ್ಯಾನ್, ಎಂ. ಕೆ. ದ್ವಿಜೇಂದ್ರ ಕುಮಾರ್, ವೀಣಾ ಭಟ್ ಮತ್ತು ಶರತ್ ಡಿ. ಶೆಟ್ಟಿ ಶುಭ ಹಾರೈಸಿದರು.
ವಕೀಲರ ಸಂಘದ ಉಪಾಧ್ಯಕ್ಷ ನಾಗೇಶ್ ಶೆಟ್ಟಿ ಡಿ. ಸ್ವಾಗತಿಸಿದರು. ಖಜಾಂಚಿ ಜಯಪ್ರಕಾಶ್ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಪ್ರವೀಣ್ ಎಸ್. ಲೋಬೊ ವಂದಿಸಿದರು.

