ಬಂಟ್ವಾಳ: ಸಾವಯವ ಕೃಷಿ ಉತ್ತಮ ಇಳುವರಿ ಪಡೆಯಲು ಕೃಷಿಕರಿಗೆ ನೆರವಾಗುತ್ತದೆ ಎಂದು ಪ್ರಗತಿಪರ ಕೃಷಿಕ ರಾಮಾಕೃಷ್ಣ ಭಟ್ ಹೇಳಿದರು. ನವಭಾರತ್ ಪರ್ಟ್ ಲೈಝರ್ಸ್ ಲಿಮಿಟೆಡ್ ಮಂಗಳೂರು ಇದರ ಆಶ್ರಯದಲ್ಲಿ ಬಂಟ್ವಾಳ ತಾಲೂಕಿನ ನಾವೂರು ಗ್ರಾಮದ ರಾಮಚಂದ್ರ ಭಟ್ ಅವರ ಮನೆಯಲ್ಲಿ ಶನಿವಾರ ಹಮ್ಮಿಕೊಂಡ ಸಾವಯವ ಕೃಷಿ ಉತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
1  4-6  10  copy (2)
ತಾನು ಸಾವಯವ ಕೃಷಿಗೆ ಹೆಚ್ಚು ಆದ್ಯತೆ ನೀಡಿದ್ದು ಕಳೆದ ಹತ್ತು ವರ್ಷದಿಂದ ನವಭಾರತ್ ಕಂಪೆನಿಯ ಉತ್ಪನ್ನಗಳನ್ನು ತನ್ನ ಕೃಷಿಗೆ ಬಳಸುತ್ತಿದ್ದು ಉತ್ತಮ ಇಳುವರಿಯೊಂದಿಗೆ ಅಧಿಕ ಲಾಭ ಪಡೆದುಕೊಳ್ಳುತ್ತಿದ್ದೇನೆ ಎಂದು ಅವರು ಮಾಹಿತಿ ಹಂಚಿಕೊಂಡರು.
ಕಂಪೆನಿಯ ಡಿಎಸ್ಎಂ ಸುಕುಮಾರ ಅವರು ಕಂಪೆನಿಯ ಸಾವಯವ ಗೊಬ್ಬರಗಳ ಬಗ್ಗೆ ಕೃಷಿಕರಿಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಕೃಷಿಕ ಪಾಸ್ಕಲ್ ಡಿಸೋಜ್, ಮಹಾಲಿಂಗೇಶ್ವರ್ ಭಟ್, ಸ್ಟೇನಿ ಡಿಸೋಜ, ಆದೀರಾಜ ಜೈನ್, ಕಂಪೆನಿಯ ಬಿ.ಎಂ.ಪೂವಪ್ಪ, ಎ.ಒ. ಜಯಣ್ಣ, ಸತೀಶ, ಮೋಹನ ಮೊದಲಾದವರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *