ಬಂಟ್ವಾಳ: ಬಂಟ್ವಾಳ ಬಡ್ಡಕಟ್ಟೆಯ ವಾಣಿಜ್ಯ ಸಂಕೀರ್ಣದ ಬಳಿ ಅಲ್ಲಲ್ಲಿ ಗುಂಡಿಗಳು ಇದ್ದು ಗಲೀಜು ನೀರು ಶೇಖರಣೆಯಾಗಿವೆ. ಈ ಬಗ್ಗೆ ಪುರಸಭೆಗೆ ಸಾಕಷ್ಟು ಬಾರಿ ತಿಳಿಸಿದರು ಯಾವುದೇ ಕ್ರಮ ಕೈಗೊಂಡಿಲ್ಲ, ತಾಲೂಕಿನಲ್ಲಿ ಡೆಂಗ್ಯೂ, ಮಲೇರಿಯಾದಂತಹ ಮಾರಕ ಸಾಂಕ್ರಮಿಕ ರೋಗಗಳು ಹೆಚ್ಚಾಗುತ್ತಿದ್ದು ಜನರು ಭಯಬೀತರಾಗಿದ್ದಾರೆ ಹಾಗಾಗಿ ಗುಂಡಿಗಳನ್ನು ಮುಚ್ಚಿ ಸ್ವಚ್ಚತೆಗೆ ಆದ್ಯತೆ ಕೊಡುವ ಬಗ್ಗೆ ಪೋಲೀಸ್ ಇಲಾಖೆ ಪುರಸಭೆಗೆ ಮನವಿ ಮಾಡಬೇಕು ಎಂದು ವಿಶ್ವನಾಥ ಚೆಂಡ್ತಿಮಾರ್ ಹೇಳಿದರು .
DSC_1231

ಅವರು ಬಂಟ್ವಾಳ ನಗರ ಠಾಣೆಯಲ್ಲಿ ನಡೆದ ಬಂಟ್ವಾಳ ನಗರ ಠಾಣೆ ಮತ್ತು ಗ್ರಾಮಾಂತರ ಠಾಣಾ ವ್ಯಾಪ್ತಿಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುಂದುಕೊರತೆಗಳ ಸಭೆಯಲ್ಲಿ ಹೇಳಿದರು. ಕಲ್ಲಿನ ಕೋರೆಗಳನ್ನು ಮಳೆಗಾಲ ಬರುವ ಮೊದಲೇ ಮುಚ್ಚಬೇಕು ಎಂದು ಜಿಲ್ಲಾಧಿಕಾರಿಗಳ ಅದೇಶವಿದ್ದರೂ ಕೂಡಾ ಬಂಟ್ವಾಳ ತಾಲೂಕಿನ ಕಂಚಿನಡ್ಕ ಪದವು ಎಂಬಲ್ಲಿ ಕೋರೆಗಳು ಹಾಗೇಯೇ ಸಾವಿನ ಬಾಗಿಲು ತರೆದಂತೆ ಇದೆ. ಯಾವ ಗುಂಡಿಯನ್ನು ಕೂಡಾ ಇವರೆಗೆ ಮುಚ್ಚದೆ ಅದರಲ್ಲಿ ನೀರು ತುಂಬಿ ಅಪಾಯವನ್ನು ಎದರುನೋಡುತ್ತಿದೆ ಎಂದು ಸಭೆಯಲ್ಲಿ ತಿಳಿಸಿದರು.

ಸಾಕಷ್ಟು ಶಾಲಾ ವಾಹನಗಳ ಅವಘಡಗಳು ಸಂಭವಿಸಿದರೂ ಕೂಡಾ ನಿಯಮಗಳನ್ನು ಪಾಲಿಸದೆ ಇನ್ನೂ ಕೂಡಾ ಸಂಚರಿಸುತ್ತಿವೆ. ಸಾರಿಗೆ ಇಲಾಖೆಯ ನಿಯಮಕ್ಕಿಂತ ಹೆಚ್ಚು ಮಕ್ಕಳನ್ನು ರಿಕ್ಷಾ ಟೆಂಪೋ ಮತ್ತು ಬಸ್ಸುಗಳಲ್ಲಿ ಹಾಕಿಕೊಂಡು ಮಕ್ಕಳ ಬ್ಯಾಗ್ಗಳನ್ನು ಹೊರಗೆ ನೇತಾಡಿಸಿಕೊಂಡು ಒವರ್ಸ್ಪೀಡ್ ಚಾಲನೆಯ ಬಗ್ಗೆ ಸಂಚಾರ ಪೋಲೀಸ್ ಕ್ರಮಕೈಗೊಳ್ಳಬೇಕು ಎಂದರು. ಜೊತೆಗೆ ಸಂಚಾರ ವ್ಯವಸ್ಥೆ ಸಾಕಷ್ಟು ಹದಗೆಟ್ಟಿದ್ದು ಸಾರ್ವಜನಕರಿಗೆ ತೊಂದರೆಯಾಗುತ್ತಿದೆ ಈ ಬಗ್ಗೆಯೂ ಪೋಲೀಸ್ ಇಲಾಖೆ ಗಮನಹರಿಸಬೇಕು. ರಾತ್ರಿ ಹೊತ್ತಲ್ಲಿ ಬೀಟ್ ವ್ಯವಸ್ಥೆಯನ್ನು ಸರಿಯಾಗಿ ಮಾಡಬೇಕು ಎಂದರು. ಬಂಟ್ವಾಳ ನಗರ ಠಾಣಾ ಎಸೈ ನಂದಕುಮಾರ್, ಗ್ರಾಮಾಂತರ ಠಾಣಾ ಎಸೈ ರಕ್ಷಿತ್ ಗೌಡ, ಸಂಚಾರಿ ಪೋಲೀಸ್ ಠಾಣಾ ಎಸೈ ಚಂದ್ರಶೇಖರಯ್ಯ, ಅಪರಾದ ವಿಭಾಗದ ಎಸೈ ಗಂಗಾದರಪ್ಪ, ಎ.ಎಸೈಗಳಾದ ಸೇಸಮ್ಮ, ಒಮನ ಮತ್ತು ಸಿಬ್ಬಂದಿಗಳಾದ ಕೃಷ್ಣ, ಕರಿಂ, ಕೃಷ್ಣ ನಾಯ್ಕ, ಲೋಕೇಶ್, ಜಗದೇಶ ಮತ್ತಿತರರು ಉಪಸ್ಥಿತರಿದ್ದರು

By suddi9

Leave a Reply

Your email address will not be published. Required fields are marked *