ಬಂಟ್ವಾಳ: ಚಿನ್ನರ ಲೋಕ ಮೋಕೆದ ಕಲಾವಿದೆರ್ ಬಂಟ್ವಾಳ ಆಶ್ರಯದಲ್ಲಿ ತುಳು ನಾಟಕೋತ್ಸವ ಸಮಿತಿ ಬಂಟ್ವಾಳ ಸಹಯೋಗದೊಂದಿಗೆ 2ನೇ ವರ್ಷದ “ತುಳು ನಾಟಕ ಅಭಿನಯ ಸ್ಪರ್ಧೆ 2016” ಅಗಸ್ಟ್ 7ರಿಂದ 14ರವರೆಗೆ ಪ್ರತಿದಿನ ಸಂಜೆ 7ಕ್ಕೆ ಬಂಟ್ವಾಳ ಬಡ್ಡಕಟ್ಟೆಯ ನಿತ್ಯಾನಂದ ಮಂದಿರದ ಬಳಿ ಇರುವ ಮೈದಾನದಲ್ಲಿ ನಡೆಯಲಿದೆ. ಈ ಸ್ಪರ್ಧೆಯು ಸಂಪೂರ್ಣ ಬಂಟ್ವಾಳ ತಾಲೂಕಿನ ಕಲಾವಿದರಿಗೆ ಮಾತ್ರ ಸೀಮಿತವಾಗಿದ್ದು ರಚನೆಗಾರ, ನಿರ್ದೇಶಕ ಹಾಗೂ ಕಲಾವಿದರು ಬಂಟ್ವಾಳ ತಾಲೂಕಿನವರೆ ಆಗಿರಬೇಕು. ವಿಜೇತ ತಂಡಗಳಿಗೆ ಪ್ರಥಮ ರೂ 20000/- ದ್ವಿತೀಯ ರೂ. 15000/-.ತೃತೀಯ ರೂ.10000/ ನಗದು ಹಾಗೂ ಪ್ರಶಸ್ತಿ, ಉತ್ತಮ ನಟ, ನಟಿ, ಹಾಸ್ಯ ನಟ, ಹಾಸ್ಯ ನಟಿ, ಪೋಷಕ ನಟ- ನಟಿ, ಉತ್ತಮ ನಿರ್ದೇಶನ, ಉತ್ತಮ ಸಂಗೀತ ಹಾಗೂ ಉತ್ತಮ ಕಥೆ ಸಂಬಾಷಣೆಗೆ ವಿಶೇಷ ಪುರಸ್ಕಾರ ನೀಡಲಾಗುವುದು. ಆಸಕ್ತ ತಂಡಗಳು ಜೂನ್.26ರ ಮೊದಲು ಪ್ರವೇಶ ಶುಲ್ಕ ರೂ.5000/-ದೊಂದಿಗೆ ಹೆಸರು ನೋಂದಾಯಿಸಬಹುದಾಗಿದೆ. ಪ್ರವೇಶ ಶುಲ್ಕವನ್ನು ಗೌರವಧನದೊಂದಿಗೆ ಪ್ರದರ್ಶನದ ನಂತರ ವಾಪಾಸು ನೀಲಾಗುವುದು. ಹೆಚ್ಚಿನ ಮಾಹಿತಿಗಾಗಿ ಅಧ್ಯಕ್ಷ ಸುಭಾಶ್ಚಂದ್ರ ಜೈನ್ ಸ್ಪರ್ಶ ಎಂಟರ್ ಪ್ರೈಸಸ್ ಬಂಟ್ವಾಳ ಮೊ.9448869256 ಅಥವಾ ಸಂಚಾಲಕ ಮೋಹನ್ದಾಸ್ ಕೊಟ್ಟಾರಿ ಮೊಗರ್ನಾಡು ಮೊ: 9900473857 ರನ್ನು ಸಂಪರ್ಕಿ ಸಬಹುದು ಎಂದು ಸಮಿತಿ ಗೌರವಾಧ್ಯಕ್ಷ ಸುದರ್ಶನ್ ಜೈನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
