ಕೈಕಂಬ: ಪೊಳಲಿ ದೇವಳದಲ್ಲಿ ಮಂಗಳವಾರ ಬೆಳ್ಳಿ ತಂಬಿಗೆಯಲ್ಲಿ ನಾಣ್ಯ ತುಂಬಿಸಿ ಪುಷ್ಪಾಕ್ಷತೆ ಮೇಲೆ ಸುವರ್ಣ ನಾಣ್ಯ ಇಟ್ಟು ಸಾವಿರ ಸೀಮೆಯವರೆಲ್ಲ ಸೇರಿ ಶ್ರೀ ರಾಜರಾಜೇಶ್ವರೀ ದೇವಿಯ ಬಲಗಡೆಯಲ್ಲಿರುವ ಶ್ರೀ ದುರ್ಗಾದೇವಿಯಲ್ಲಿ ಜೀಣೋದ್ಧಾರ ಹಾಗೂ ನವೀಕರಣದ ಪ್ರಾಯಶ್ಚಿತ್ತಾದಿ ಪರಿಹಾರ ಮುಂತಾದ ಕಾರ್ಯವನ್ನು ನಿರ್ವಿಘ್ನವಾಗಿ ಅನುಗ್ರಹಿಸುವಂತೆ ಶಾವಿರ ಸೀಮೇಯ ಭಕ್ತಾಧಿಗಳು ಒಟ್ಟು ಸೇರಿ ದೇವಿಯಲ್ಲಿ ಪ್ರಾರ್ಥಿಸಿದರು. ಬೆಳಗ್ಗೆ ದುರ್ಗಾ ದೇವಿಯ ಮುಂಬಾಗದಲ್ಲಿ ಪೊಳಲಿ ಸುಬ್ರಹ್ಮಣ್ಯ ತಂತ್ರಿ ಹಾಗೂ ವೆಂಕಟೇಶ್ ತಂತ್ರಿಗಳ ನೇತ್ರತವದಲ್ಲಿ ದೇವಳದ ಪವಿತ್ರಪಾಣಿ ಮಾಧವ ಭಟ್ , ನಾರಾಯಣ ಭಟ್, ರಾಮ್ ಭಟ್,ಪರಮೇಶ್ವರ ಭಟ್,ವಿಷ್ಣು ಮೂರ್ತ ಭಟ್, ಪರ್ದಕಾಂಡ ವಾಸುದೇವ ಭಟ್, ಪರಮೇಶ್ವರ ಭಟ್ ದೋಟ, ಚಂದ್ರಶೇಖರ ಭಟ್, ಪದ್ಮಾನಾಭ ಭಟ್, ವಾಸುದೇವ ಮಯ್ಯ, ರಾಜ ಭಟ್, ಮಾಧವ ಮಯ್ಯ ಇವರುಗಳು ಪೂಜಾ ವಿದಿ ವಿಧಾನಗಳಲ್ಲಿ ದುರ್ಗಾಹೋಮ, ಮಹಿಷಮರ್ದಿನಿ ಹೋಮ, ಮಂತ್ರದಿಂದ ದುರ್ಗಾಹೋಮ ದೇವಳದಲ್ಲಿ ಜರಗಿತು.

ಈ ಸಂದರ್ಭದಲ್ಲಿ ದೇವಳದ ಕಾರ್ಯನಿರ್ವಹಣಾಧಿಕಾರಿ ಹರೀಶ್ಚಂದ್ರ, ಅಮ್ಮುಂಜೆಗುತ್ತು ಡಾ.ಮಂಜಯ್ಯ ಶೆಟ್ಟಿ, ಮೊಕ್ತೇಸರಾದ ಯು. ತಾರಾನಾಥ ಆಳ್ವ, ಚೇರ ಸೂರ್ಯನಾರಾಯಣ ರಾವ್, ಉಳಿಪಾಡಿ ಗುತ್ತುಕೃಷ್ಣರಾಜ ಮಾರ್ಲ, ಶಿವಪ್ರಸಾದ್ ಶೆಟ್ಟಿ, ಕೃಷ್ಣಕುಮಾರ್ ಪೂಂಜ, ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಸಂಪತ್ ಕುಮಾರ್ ಶೆಟ್ಟಿ ಸೋಮಶೇಖರ ಶೆಟ್ಟಿ. ರಂಗನಾಥ ಶೆಟ್ಟಿ ಅಮ್ಮುಂಜೆಗುತ್ತು , ವಿದ್ಯಾಧರಣ್ ಭಂಡಾರಿ ಮೊಗರುಗುತ್ತು, ಜೀವರಾಜ ಶೆಟ್ಟಿ, ವೆಂಕಟೇಶ ನಾವಡ,ಚಂದ್ರಶೇಖರ ಭಂಡಾರಿ, ಸುಬ್ರಾಯ ಕಾರಂತ, ವಿನೋದ್ ಮಾಡ ಹಾಗೂ ಸಾವಿರ ಸೀಮೇಯ ಭಕ್ತಾಧಿಗಳು ಪೂಜೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.
















