ಬಂಟ್ವಾಳ: ಬಂಟ್ವಾಳ ತಾಲೂಕಿನ ಕೂರಿಯಾಳ ಎಂಬಲ್ಲಿ ಎಂಬವರಿಗೆ ಬಂಟ್ವಾಳ ತಾಲೂಕು ಕುಲಾಲ ಯುವ ವೇದಿಕೆಯ ವತಿಯಿಂದ ಅಮ್ಟೂರು ಎಂಬಲ್ಲಿ ನಿರ್ಮಿಸಲಾಗುತ್ತಿರುವ ನೂತನ ಮನೆಗೆ ಕೆಸರು ಕಲ್ಲು ಹಾಕುವ ಕಾರ್ಯಕ್ರಮ ನಡೆಯಿತು. ಪ್ರಗತಿಪರ ಕೃಷಿಕ ಉಳೀಪಾಡಿ ಗುತ್ತು ರಾಜೇಶ್ ನಾಕ್ ಮನೆ ನಿರ್ಮಾಣಕ್ಕೆ 1 ಲಕ್ಷ ರುಪಾಯಿ ಸಹಾಯ ಧನ ನೀಡಿದ್ದಾರೆ. ಬಿ. ಕೃಷ್ಣಪ್ಪ ನಿವೇಶನವನ್ನು ದಾನವಾಗಿ ಒದಗಿಸಿದ್ದಾರೆ. ಬಾಲಕ್ರಷ್ಣ ಅವರು ಹಲವಾರು ವರ್ಷದಿಂದ ಜಮೀನ್ದಾರರೊಬ್ಬರ ಮನೆಯಲ್ಲಿ ತೋಟದ ಕಾರ್ಮೀಕರಾಗಿ ದುಡಿಯುತ್ತಿದ್ದರು. ಕೂರಿಯಳದ ಮನೆಯಲ್ಲಿ ತೋಟದ ಕಾರ್ಮಿಕರಾಗಿ ದುಡಿಯುತ್ತಿದ್ದ ವೇಳೆ ಬೆಂಕಿ ಆಕಸ್ಮಿಕದಲ್ಲಿ ಬಾಲಕೃಷ್ಣ ಕುಲಾಲ್ ಅವರ ಮಗಳು ಗಂಭೀರ ಗಾಯಗೊಂಡಿದ್ದಳು. ಸುದೀರ್ಘ ಕಾಲದ ಚಿಕಿತ್ಸೆಯ ಬಳಿಕ ಮಗಳು ಗುಣಮುಖಳಾಗಿದ್ದಳೆ ಈ ನಡುವೆ ಜಮೀನ್ದಾರ ಈ ಬಡ ಕುಟುಂಬವನ್ನು ಮನೆಯಿಂದ ಹೊರತಬ್ಬಿದ್ದ ಪರಿಣಾಮ ಕುಟುಂಬ ನಿರ್ಗತಿಕವಾಗಿತ್ತು. ಈ ಸಂದರ್ಭ ಆಸರೆಯಾಗಿ ನಿಂತ ಬಂಟ್ವಾಳ ಕುಲಾಲ ಯುವವೇದಿಕೆ ಬಡಕುಟುಂಬಕ್ಕೆ ಮನೆಕಟ್ಟಿ ಕೊಡುವ ಭರವಸೆ ನೀಡಿತ್ತು. ಅದರ ಮೊದಲ ಹಂತವೆಂಬಂತೆ ಕೆಸರುಕಲ್ಲು ಹಾಕುವ ಕಾರ್ಯ ನಡೆದಿದೆ. ಈ ಸಂದರ್ಭ ಯುವವೇದಿಕೆಯ ಪ್ರಮುಖರಾದ ಲಕ್ಷ್ಮಣ ಅಗ್ರಬೈಲು, ಆನಂದ ಕುಲಾಲ್, ಮಚ್ಚೇಂದ್ರ ಸಾಲ್ಯಾನ್ ಮತ್ತಿತರರು ಹಾಜರಿದ್ದರು.

By suddi9

Leave a Reply

Your email address will not be published. Required fields are marked *